ಮುಂಬೈ, ಜು. 14(DaijiworldNews/AK):ಅಂಬಾನಿ ಮಗನ ಮದುವೆ ಅದ್ಧೂರಿಯಾಗಿ ಜು.12ರಂದು ನಡೆದಿದ್ದು, ಅನಂತ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ದಂಡೇ ಬಂದಿದೆ. ಅನಂತ್ ಮದುವೆಗೆ ಬಂದ ಸ್ಟಾರ್ಸ್ಗೆ ಅಂಬಾನಿ ದುಬಾರಿ ವಾಚ್ ಅನ್ನು ರಿಟರ್ನ್ ಗಿಫ್ಟ್ ಮಾಡಿದ್ದಾರೆ.
ಮದುವೆಗೆ ಬಂದವರು ನವಜೋಡಿಗೆ ಉಡುಗೊರೆ ಕೊಡುವುದು ಪದ್ಧತಿ. ಆದರೆ ತಮ್ಮ ಮನೆಯ ಮದುವೆಗೆ ಅತಿಥಿಗಳಾಗಿ ಬಂದಿದ್ದ ಸಿನಿಮಾ ತಾರೆಯರಿಗೆ ದುಬಾರಿ ಉಡುಗೊರೆ ಕೊಟ್ಟು ಕಳುಹಿಸಿದ್ದಾರೆ ಅಂಬಾನಿ ಕುಟುಂಬಸ್ಥರು. ಇದು ಈಗ ನೆಟ್ಟಿಗರ ಚಚರ್ಚೆಯ ಕೇಂದ್ರವಾಗಿದೆ.ಈ ವಿವಾಹದಲ್ಲಿ ಭಾಗಿಯಾದ ಸಿನಿಮಾ ಮಂದಿಗೆ ಅನಂತ್ ಅಂಬಾನಿ ಐಷಾರಾಮಿ ವಾಚ್ಗಳನ್ನು ನೀಡಿದ್ದಾರೆ. ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ರಣವೀರ್ ಸಿಂಗ್ಗೆ ಸೇರಿದಂತೆ ಅನೇಕರಿಗೆ ಈ ದುಬಾರಿ ವಾಚ್ಗಳು ಸಿಕ್ಕಿದೆ. ಈ ವಾಚ್ಗಳು ತಲಾ 2 ಕೋಟಿ ರೂ. ಮೌಲ್ಯದ್ದಾಗಿದೆ.
ಅಂಬಾನಿಯಿಂದ ಉಡುಗೊರೆಯಾಗಿ ಪಡೆದ ವಾಚ್ಗಳು ಆಡೆಮರ್ಸ್ ಪಿಗುಯೆಟ್ ಕಂಪನಿಯದ್ದಾಗಿದೆ. 9.5 ಮಿಮೀ ದಪ್ಪವಿರುವ ಕೈಗಡಿಯಾರ ಇದಾಗಿದೆ. 41 ಎಂಎಂ 18 ಕ್ಯಾರಟ್ನ ಚಿನ್ನದ ವಾಚ್ಗಳಾಗಿವೆ. ವಾಚ್ನಲ್ಲಿ ವಾರ, ದಿನ, ದಿನಾಂಕ ಇನ್ನೀತರ ಮಾಹಿತಿಯನ್ನು ನೀಡುತ್ತದೆ.