ಬೆಂಗಳೂರು, ಜು 11(DaijiworldNews/ AK):ಕಿಚ್ಚ ಸುದೀಪ್ ನಟನೆಯ ʼಮ್ಯಾಕ್ಸ್ʼ ಚಿತ್ರದ ಬಗ್ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.ವಿಕ್ರಾಂತ್ ರೋಣ ಬಳಿಕ ಒಂದಷ್ಟು ಗ್ಯಾಪ್ ಪಡೆದುಕೊಂಡ ಕಿಚ್ಚ ಮತ್ತೆ ಮ್ಯಾಕ್ಸ್ ಮೂಲಕ ಸಿನಿಮಂದಿಯನ್ನು ಮನರಂಜಿಸಲಿದ್ದಾರೆ. ಮ್ಯಾಕ್ಸ್ʼ ಸೆಟ್ಟೇ ರಿದ ಬಳಿಕ ಅಷ್ಟಾಗಿ ಅಪ್ಡೇಟ್ ಸಿಗದೆ ಇರುವುದರಿಂದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.
ಶೂಟಿಂಗ್ ಮುಗಿಸಿರುವ ʼಮ್ಯಾಕ್ಸ್ʼ ಶೀಘ್ರದಲ್ಲೇ ಬಿಗ್ ಅಪ್ಡೇಟ್ ನೀಡುವುದಾಗಿ ಇತ್ತೀಚೆಗೆ ಹೇಳಿತ್ತು. ಟೀಸರ್ ಆದರೂ ರಿಲೀಸ್ ಮಾಡಿ ಎಂದೂ ಅಭಿಮಾನಿಗಳ ಮಾತು.
ಇದೀಗ ಚಿತ್ರತಂಡ ಬಿಗ್ ಅಪ್ಡೇ ಟ್ ಯಾವಾಗ ಸಿಗಲಿದೆ ಎನ್ನುವುದನ್ನು ರಿವೀಲ್ ಮಾಡಿದೆ. ಜುಲೈ.16 ರಂದು ಮಧ್ಯಾಹ್ನ 12:34ಕ್ಕೆ ಮ್ಯಾಕ್ಸ್ʼ ಬಿಗ್ ಅಪ್ಡೇ ಟ್ ಬರಲಿದೆ ಎಂದು ಕೆಆರ್ ಜಿ ಹೇಳಿದೆ. ಇದನ್ನು ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ.
ಜು.16 ರಂದು ʼಮ್ಯಾಕ್ಸ್ʼ ಟೀಸರ್ ಬರುತ್ತೋ ಟ್ರೇ ಲರ್ ಬರುತ್ತೋ ಅಥವಾ ರಿಲೀಸ್ ಡೇಟ್ ಅನೌನ್ಸ್ ಆಗುತ್ತೋ ಎನ್ನುವುದನ್ನು ಅಭಿಮಾನಿಗಳು ಮನದಾಳದ ಮಾತು.ಇದೇ ವರ್ಷ ʼಮ್ಯಾಕ್ಸ್ʼ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಆಗಸ್ಟ್ 15ರಂದು, ಸ್ವಾತಂತ್ರ್ಯ ದಿನದಂದು ಮ್ಯಾಕ್ಸ್ ಥಿಯೇಟರ್ ಗೆ ಎಂಟ್ರಿ ಕೊಡಲಿದೆ ಎನ್ನಲಾಗುತ್ತಿದೆ.