ಬೆಂಗಳೂರು, ಜು. 10(DaijiworldNews/AA): ಟಾಲಿವುಡ್ ನ ನ್ಯಾಚುರಲ್ ಸ್ಟಾರ್ ನಾನಿಗೆ ಸ್ಯಾಂಡಲ್ ವುಡ್ ನಟಿ ಪ್ರಿಯಾಂಕ ಮೋಹನ್ ಜೋಡಿಯಾಗಿ ನಟಿಸುತ್ತಿದ್ದಾರೆ.
ನ್ಯಾಚುರಲ್ ಸ್ಟಾರ್ ನಾನಿ ಅವರ ಹೊಸ ಸಿನಿಮಾ 'ಸರಿಪೋಧಾ ಸನಿವಾರಮ್' ದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಮೋಹನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ನಾನಿಗೆ ಜೋಡಿಯಾಗಿ ಪ್ರಿಯಾಂಕ ಮತ್ತೊಮ್ಮೆ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೀಗ ನಾನಿಗೆ ಜೋಡಿಯಾಗುವ ನಾಯಕಿಯ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.
ಬೆಂಗಳೂರಿನ ಬೆಡಗಿ ಪ್ರಿಯಾಂಕಾ ಮೋಹನ್ ಅವರು ಕನ್ನಡ ಅಷ್ಟೇ ಅಲ್ಲದೇ ತೆಲುಗು, ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾನಿ ಅವರ ಹೊಸ ಸಿನಿಮಾದಲ್ಲಿ ಪ್ರಿಯಾಂಕ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದು, ಈ ಪಾತ್ರದ ಹೆಸರು ಚಾರುಲತಾ ಎಂಬುದಾಗಿದೆ.
ಈ ಹಿಂದೆ ನಾನಿ ಅವರ 'ಗ್ಯಾಂಗ್ ಲೀಡರ್' ಎಂಬ ಸಿನಿಮಾದಲ್ಲಿ ಪ್ರಿಯಾಂಕ ಅವರು ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾವನ್ನು ವಿವೇಕ್ ಆತ್ರೇಯಾ ನಿರ್ದೇಶಿಸಿದ್ದರು. ಇದೀಗ ಈ ಜೋಡಿಯ ಹೊಸ ಸಿನಿಮಾವನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರೆ.