ಚೆನ್ನೈ, ಜೂ.26(DaijiworldNews/AA): ತಮಿಳು ನಟ ಜಯಂ ರವಿ ಅವರ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದ್ದು, ದಂಪತಿಗಳಿಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇತ್ತೀಚೆಗಷ್ಟೇ ನಟ ಜಯಂ ರವಿ ಅವರ ಪತ್ನಿ ಆರತಿ ಪತಿ ಜೊತೆಗಿನ ತನ್ನ ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಡಿಲೀಟ್ ಮಾಡಿದ್ದಾರೆ. ಹಾಗೇ ತನ್ನ ಹೆಸರಿನೊಂದಿಗಿದ್ದ ಪತಿಯ ಹೆಸರನ್ನು ತೆಗೆದು ಹಾಕಿದ್ದಾರೆ. ಈ ಎಲ್ಲಾ ಕಾರಣಗಳಿಂದ ಜಯಂ ರವಿ ಹಾಗೂ ಆರತಿ ಅವರು ವಿಚ್ಛೇದನ ಪಡೆಯುತ್ತಾರೆ ಎಂಬುದು ಇನ್ನಷ್ಟು ಸ್ಪಷ್ಟವಾಗಿದೆ.
ಆರತಿ ಅವರು ತಮಿಳು ಕಿರುತೆರೆಯ ಪ್ರಖ್ಯಾತ ನಿರ್ಮಾಪಕರಾದ ಸುಜಾತಾ ವಿಜಯ್ ಕುಮಾರ್ ಅವರ ಪುತ್ರಿಯಾಗಿದ್ದಾರೆ. ನಟ ಜಯಂ ರವಿ ಹಾಗೂ ಆರತಿ ಅವರು ಪರಸ್ಪರ ಪ್ರೀತಿಸಿ 2009ರಲ್ಲಿ ಮದುವೆಯಾಗಿದ್ದರು. ಇನ್ನು ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ.