ನವದೆಹಲಿ, ಜೂ.22(DaijiworldNews/AK):ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀ ರ್ ಇಕ್ಬಾಲ್ ಅವರ ಕೈ ಹಿಡಿಯಲು ತಯಾರಿ ನಡೆಸಿದ್ದಾರೆ. ಇದರ ನಡುವೆಯೇ ಈ ಮದುವೆಗೆ ಸೋನಾಕ್ಷಿ ಮನೆಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ವರದಿಯಾಗಿದೆ.
ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಅವರು ಮಗಳು ಮಾತು ಕೇಳುತ್ತಿಲ್ಲ, ಈ ಮದುವೆ ನನಗೆ ಇಷ್ಟವಿಲ್ಲ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿತ್ತು. ಆದರೆ, ಈಗ ಈ ಎಲ್ಲ ಸುದ್ದಿಗಳಿಗೆ ನಟ ಶತ್ರುಘ್ನ ಅವರು ತೆರೆ ಎಳೆದಿದ್ದಾರೆ.
ಈ ಕುರಿತು ವಾಹಿನಿಯೊಂದರ ಜೊತೆ ಮಾತನಾಡಿರುವ ಅವರು, ಎಲ್ಲ ಮದುವೆಗಳಲ್ಲಿ ಮೊದಲು ಅನೇಕ ಒತ್ತಡಗಳು ಇರುವುದು ಸಹಜ. ಹಾಗೇ ನಮ್ಮಲ್ಲೂ ಇತ್ತು. ಸದ್ಯ ಅದೆಲ್ಲ ಸರಿಯಾಗಿದೆ ಜೂನ್ 23 ರಂದು ನಡೆಯುವ ಮದುವೆಯಲ್ಲಿ ನಾವೆಲ್ಲ ಭಾಗಿಯಾಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಸೋನಾಕ್ಷಿ ಮದುವೆ ಬಗ್ಗೆ ನಾನೇನು ಹೇಳಿರಲಿಲ್ಲ. ಕೆಲ ಮಾಧ್ಯಮಗಳೇ ಊಹೆ ಮಾಡಿಕೊಂಡು ವರದಿ ಮಾಡಿವೆ. ಅದೆಲ್ಲ ಸಹಜ. ಏನೇ ಸಮಸ್ಯೆ ಇದ್ದರೂ ಅದೆಲ್ಲ ಈಗ
ಬಗೆಹರಿದಿದೆ ಎಂದು ಹೇಳಿಕೊಂಡಿದ್ದಾರೆ.
ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಬಳಗ ಮಾತ್ರ ಭಾಗಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಸೋನಾಕ್ಷಿ ಮತ್ತು ಇಕ್ಬಾಲ್ 2022ರಲ್ಲಿ ಬಿಡುಗಡೆಯಾದ ‘ಡಬಲ್ ಎಕ್ಸ್ಎಲ್’ ಚಿತ್ರದಲ್ಲಿ ನಟಿಸಿದ್ದರು. ಆಗಿನಿಂದ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.