ಮುಂಬೈ, ಜೂ. 19(DaijiworldNews/AA): ಸ್ಟಾರ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಮೊದಲ ಬಾರಿಗೆ ನಟಿ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ದೀಪಿಕಾ ಪಡುಕೋಣೆ ಅವರು ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದಾರೆ. ಜೊತೆಗೆ ಈ ಫೋಟೋಗೆ 'ಸಾಕು, ನನಗೆ ಹಸಿವಾಗುತ್ತಿದೆ' ಎಂದು ಅಡಿಬರಹ ಕೊಟ್ಟಿದ್ದಾರೆ. ದೀಪಿಕಾ ಪಡುಕೋಣೆ ಅವರು ಕಪ್ಪು ಬಣ್ಣದ ಡ್ರೆಸ್ ಧರಿಸಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ದೀಪಿಕಾ ಪಡುಕೋಣೆ ಶೇರ್ ಮಾಡಿರುವ ಈ ಫೋಟೋಗೆ ಈಗಾಗಲೇ 10.2 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ. ಜೊತೆಗೆ ಹಲವಾರು ಕಾಮೆಂಟ್ಸ್ ಗಳು ಕೂಡ ಬಂದಿವೆ.