ಮುಂಬೈ, ಜೂ. 16(DaijiworldNews/AA): ರಶ್ಮಿಕಾ ಮಂದಣ್ಣ ಅವರು ಸದ್ಯ ಬಹು ಬೇಡಿಕೆಯ ನಟಿಯಾಗಿದ್ದು, ಇದರೊಂದಿಗೆ ಅವರ ಸಂಭಾನೆಯು ದುಪ್ಪಟ್ಟಾಗಿದೆ. ಮುಂಬರುವ ಸಲ್ಮಾನ್ ಖಾನ್ ಚಿತ್ರಕ್ಕೆ 15 ಕೋಟಿ ರೂ. ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಸೌತ್ನ ಸ್ಟಾರ್ ಡೈರೆಕ್ಟರ್ ಎ.ಆರ್ ಮುರುಗದಾಸ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿರೋದು ಹಳೆಯ ಸುದ್ದಿ. ಈ ಚಿತ್ರಕ್ಕೆ 15 ಕೋಟಿ ರೂ. ಸಂಭಾವನೆ ಬೇಡಿಕೆ ಇಡುವ ಮೂಲಕ ನಯನತಾರಾ, ತ್ರಿಷಾರನ್ನು ಹಿಂದಿಕ್ಕಿ ರಶ್ಮಿಕಾ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.
ಸಾಕಷ್ಟು ವರ್ಷಗಳಿಂದ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿಯರಾದ ನಯನತಾರಾ, ತ್ರಿಷಾ ಒಂದು ಸಿನಿಮಾಗೆ 10 ರಿಂದ 12 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ರಶ್ಮಿಕಾ, ಸಲ್ಮಾನ್ ನಟನೆಯ ಸಿಖಂದರ್ ಚಿತ್ರದಲ್ಲಿ ನಟಿಸಲು 15 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟಿದ್ದು, ಈ ಮೂಲಕ ನಯನತಾರಾ ಹಾಗೂ ತ್ರಿಷಾ ಅವರನ್ನು ಹಿಂದಿಕ್ಕಿದ್ದಾರೆ.
ನಟಿ ರಶ್ಮಿಕಾ ಅವರು 15 ಕೋಟಿ ರೂ. ಬೇಡಿಕೆಯಿಟ್ಟ ಬಳಿಕ ಸಿಖಂದರ್ ಚಿತ್ರತಂಡ 13 ಕೋಟಿ ರೂ. ಸಂಭಾವನೆ ನೀಡಲು ಒಪ್ಪಿಸಿದೆ ಎಂದು ತಿಳಿದುಬಂದಿದೆ. ಇದೀಗ ಭಾರೀ ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಕೂಡ ಅಗ್ರ ಸ್ಥಾನದಲ್ಲಿದ್ದಾರೆ.