ಮುಂಬೈ, ಜೂ. 14(DaijiworldNews/AA): ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಇದೀಗ ನೂತನ ಸಂಸದೆಯಾಗಿ ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ ಅವರು, ಸಿನಿಮಾದಲ್ಲಿ ನಟಿಯಾಗಿ ದುಡಿಯೋದು ರಾಜಕೀಯಕ್ಕಿಂತಲೂ ಸುಲಭ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ರಾಜಕೀಯ ಕೆಲಸಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಕಂಗನಾ ಅವರು, ನನಗೆ ಇಷ್ಟ ಬಂದಿದ್ದನ್ನು ನಾನು ಮಾಡುತ್ತೇನೆ. ಚಿತ್ರೋದ್ಯಮದಲ್ಲಿ ನಟಿ. ಬರಹಗಾತಿ, ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಇಲ್ಲಿನ ಜನರೊಂದಿಗೆ ನನ್ನನ್ನು ತೊಡಗಿಸಿಕೊಳ್ಳಬೇಕು. ರಾಜಕೀಯದಲ್ಲೇ ಮುಂದುವರೆಯುವ ಆಸೆಯಿದೆ ಎಂದು ಅವರು ಹೇಳಿದ್ದಾರೆ.
ನನ್ನ ಮೇಲೆ ಯಾವುದೇ ಒತ್ತಡವೂ ಇಲ್ಲ. ಆದರೂ ನನಗೆ ಅನಿಸಿದ ಹಾಗೆ ರಾಜಕೀಯಕ್ಕಿಂತಲೂ ಸಿನಿಮಾ ಸುಲಭ. ರಾಜಕಾರಣ ವೈದ್ಯಕೀಯ ವೃತ್ತಿಯಂತೆ ಸ್ವಲ್ಪ ಕಷ್ಟಕರವಾಗಿದೆ. ಆರೋಗ್ಯದಲ್ಲಿ ತೊಂದರೆಗೊಳಗಾದವರು ಮಾತ್ರ ನಿಮ್ಮ ಬಳಿ ಬರುತ್ತಾರೆ. ಆದರೆ ಸಿನಿಮಾ ನೋಡವವರಿಗೆ ಮನರಂಜನೆಯ ಜೊತೆ ರಿಲೀಫ್ ಕೂಡ ಸಿಗಲಿದೆ. ಆದರೆ ರಾಜಕೀಯ ಹಾಗಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.