ಮುಂಬೈ,ಮೇ12(DaijiworldNews/AZM):ಪ್ರಧಾನಿ ಮೋದಿ ಮತ್ತೇ ಪ್ರಧಾನಿಯಾದರೆ ತಾನು ದೇಶ ಬಿಡುತ್ತೇನೆ ಎಂದು ಬಾಲಿವುಡ್ ನಟಿ ಶಬಾನ ಅಜ್ಮಿ ಹೇಳಿದ್ದಾರೆ ಎನ್ನುವ ಮಾತು ಕೇಳಿ ಬಂದಿದ್ದು, ಇದಕ್ಕೆ ಅವರು ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ಮೋದಿಯವರು ಪ್ರಧಾನಿಯಾದರೆ ದೇಶ ಬಿಡುತ್ತೇವೆ ಎಂದು ಹಲವರು ಹೇಳುತ್ತಿರುವ ಬೆನ್ನಲ್ಲೇ ನಟಿ ಶಬಾನಾ ಅಜ್ಮಿ ಕೂಡಾ ಇದೇ ಘೋಷಣೆ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಈ ಮಾತು ಸುಳ್ಳು ಎಂದು ಅವರು ಟ್ವೀಟರ್ ನಲ್ಲಿ ಪ್ರತಿಕ್ರಯಿಸಿದ್ದಾರೆ. "ನಾನು ಹಾಗೆಲ್ಲ ಹೇಳೇ ಇಲ್ಲ, ಅದೊಂದು ಸುಳ್ಳು ಸುದ್ದಿ" ಎಂದು ಶಬಾನಾ ಹೇಳಿದ್ದಾರೆ. ನನಗೆ ದೇಶ ಬಿಡುವ ಯಾವ ಗುರಿಯೂ ಇಲ್ಲ. ನಾನು ಇಲ್ಲೇ ಹುಟ್ಟಿದ್ದು, ಇಲ್ಲೇ ಸಾಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಅವರು ಹಾಗೆ ಹೇಳಿದ್ದಾರೆಂದು ಹಬ್ಬಿರುವ ಸುದ್ದಿಗೆ ಅಸಮಾಧಾನ ವ್ಯಕ್ತಪಡಿಸಿರುವ ಶಬಾನಾ, ವಾದವನ್ನು ತರ್ಕದಿಂದ ಇಲ್ಲವಾಗಿಸುವುದು ಪ್ರಬುದ್ಧತೆಯೇ ಹೊರತು ವಾದಿಸುವವರನ್ನು ಇಲ್ಲವಾಗಿಸುವುದಲ್ಲ ಎಂದು ಟ್ವೀಟ್ ಮಾಡಿದ್ದಾರೆ.