ಮುಂಬೈ, ಮೇ.31(DaijiworldNews/AA): ನಟಿ ಮಲೈಕಾ ಅರೋರಾ ಹಾಗೂ ನಟ ಅರ್ಜುನ್ ಕಪೂರ್ ಬೇರೆ ಆಗಲು ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ.
ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಅವರು ಮುಂದೇನಾಗಬಹುದು ಎಂಬುದನ್ನು ಅರ್ಥ ಮಾಡಿಕೊಂಡು ಬೇರೆಯಾಗಲು ನಿರ್ಧಾರ ಮಾಡಿದ್ದಾರೆ. ತಾವಿಬ್ಬರೂ ಬೇರೆಯಾಗುತ್ತಿರುವ ವಿಚಾರ ದೊಡ್ಡದಾಗಬಾರದು ಎಂಬ ವಿಚಾರಕ್ಕೆ ಈ ವಿಚಾರದಲ್ಲಿ ಸುಮ್ಮನಿದ್ದಾರೆ ಎನ್ನಲಾಗಿದೆ.
ಅರ್ಜುನ್ ಕಪೂರ್ ಗೆ 38 ವರ್ಷವಾಗಿದೆ. ಮಲೈಕಾ ಅವರಿಗೆ 50 ವರ್ಷವಾಗಿದ್ದು, 22 ವರ್ಷದ ಒಬ್ಬ ಮಗನೂ ಇದ್ದಾನೆ. ಇವರಿಬ್ಬರು ತಮ್ಮ ವಯಸ್ಸಿನ ಅಂತರ ವಿಚಾರದಲ್ಲಿ ಸಖತ್ ಟ್ರೋಲ್ ಕೂಡ ಆಗಿದ್ದರು. ಅರ್ಜುನ್ ಕಪೂರ್ ಅವರಿಗೆ ಇನ್ನೂ ಮದುವೆ ಆಗಿಲ್ಲ. ಅವರು ಮದುವೆಯಾಗಿ ಮಗುವನ್ನು ಪಡೆಯಬೇಕು ಎಂಬ ಕನಸು ಕಂಡಿದ್ದು, ಮಲೈಕಾ ವಯಸ್ಸಿಗೆ ಅದು ಸಾಧ್ಯವಿಲ್ಲ. ಈ ಕಾರಣದಿಂದಲೇ ಸದ್ದಿಲ್ಲದೇ ಇವರಿಬ್ಬರು ಬೇರೆಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಜೋಡಿ ಬೇರೆಯಾದರೂ ಇವರಿಬ್ಬರು ಈಗಲೂ ಉತ್ತಮ ಫ್ರೆಂಡ್ಶಿಪ್ ಇದೆ. ಮುಂದೆಯೂ ಉತ್ತಮ ಸ್ನೇಹಿತರಾಗಿಯೇ ಇರುತ್ತಾರೆ. ಮುಂದೆಯೂ ಕಾರ್ಯಕ್ರಮಗಳಲ್ಲಿ ಸಿಕ್ಕರೆ ಪರಸ್ಪರ ನಗುನಗುತ್ತಾ ಮಾತನಾಡುವ ನಿರ್ಧಾರವನ್ನು ಇವರು ತೆಗೆದುಕೊಂಡಿದ್ದಾರೆ.