ನ್ಯೂಯಾರ್ಕ್, ಮೇ07(Daijiworld News/SS): ಅಮೆರಿಕದ ಮೆಟ್ ಗಾಲಾ ಸಮಾರಂಭದಲ್ಲಿ ಭಾಗವಹಿಸಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಖ್ ಜೋನಾಸ್ ವಿಚಿತ್ರ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.
ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಸೇರಿದಂತೆ ಹಾಲಿವುಡ್ ನಟ-ನಟಿಯರು ವಿಚಿತ್ರ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಸಾಧಾರಣವಾಗಿ ಕಾಣಿಸಿಕೊಂಡಿದ್ದರೆ, ಪ್ರಿಯಾಂಕಾ ಚೋಪ್ರಾರ ವೇಷ ಮಾತ್ರ ಭಯಾನಕವಾಗಿದತ್ತು. ಹೀಗಾಗಿ ಪ್ರಿಯಾಂಕಾ ಚೋಪ್ರಾ ಫೋಟೋಗೆ ನೆಟ್ಟಿಗರು ಗೇಲಿ ಮಾಡುತ್ತಿದ್ದಾರೆ.
ಮೆಟ್ ಗಾಲಾ ಈವೆಂಟ್ನಲ್ಲಿ ಇದು ಹೊಸದೇನಲ್ಲ. ಇದಕ್ಕಿಂತ ಚಿತ್ರ ವಿಚಿತ್ರ ಲುಕ್ಗಳಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಳ್ತಾರೆ. ಪ್ರತಿ ವರ್ಷ ನಡೆಯೋ ಈ ಈವೆಂಟ್ನಲ್ಲಿ ಥೀಮ್ ಪ್ರಕಾರ ಡ್ರೆಸ್ ಮಾಡಿಕೊಳ್ಳಬೇಕು. ಹೀಗಾಗಿ ಪ್ರಿಯಾಂಕಾ ಹಾಗು ದೀಪಿಕಾ ಪುಡಕೋಣೆ ಇಂಥ ಡ್ರಮ್ಯಾಟಿಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸತತ ಮೂರನೇ ವರ್ಷ ಮೆಟ್ ಗಾಲಾದಲ್ಲಿ ಭಾಗಿಯಾಗಿರೋ ಪ್ರಿಯಾಂಕ, ಪತಿ ನಿಕ್ ಜೋನಾಸ್ ಜೊತೆ ಆಗಮಿಸಿದ್ರು. ಇಬ್ಬರೂ ಡಿಯೋರ್ ಬಟ್ಟೆಗಳನ್ನ ಧರಿಸಿದ್ದರು. ಪ್ರಿಯಾಂಕಾ ಸಿಲ್ವರ್ ಬಣ್ಣದ ಮೆಶ್ ಗೌನ್ನಲ್ಲಿ ಕಾಣಿಸಿಕೊಂಡ್ರು. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಪ್ರಿಯಾಂಕಾಳ ಹೇರ್ಸ್ಟೈಲ್. ಇನ್ನು ನಿಕ್ ಜೋನಾಸ್ ಬಿಳಿ ಬಣ್ಣದ ಸೂಟ್ ಹಾಗೂ ಸಿಲ್ವರ್ ಕಲರ್ ಶೂ ಧರಿಸಿದ್ದರು.