ಕೊಚ್ಚಿ, ಮೇ.8(DaijiworldNews/AA): ತನ್ನ ಸಹಜ ನಟನೆಯ ಮೂಲಕ ಜನರ ಮನಸ್ಸನ್ನು ಗೆದ್ದಿರುವ ನಟಿ ಭಾಮಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಛೇದನ ಪಡೆದಿದ್ದಾರೆ.
ನಟಿ ಭಾಮಾ ಅವರು 2020ರ ಜನವರಿಯಲ್ಲಿ ಉದ್ಯಮಿ ಅರುಣ್ ಜಗದೀಶ್ ಅವರೊಂದಿಗೆ ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬಳು ಮಗಳು ಕೂಡ ಇದ್ದಾಳೆ. ಇದೀಗ ನಟಿಯ ಸಾಮಾಜಿಕ ಜಾಲತಾಣದ ಪೋಸ್ಟ್ ಹಲವು ಚರ್ಚೆಗೆ ಕಾರಣವಾಗಿದೆ.
ನಟಿ ಭಾಮಾ ಅವರು ಅರುಣ್ ಜೊತೆಗಿನ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದರು. ತಮ್ಮ ಹೆಸರಿನ ಪಕ್ಕ ಇರುವ ಅರುಣ್ ಹೆಸರನ್ನು ಕೂಡ ತೆಗೆದಿದ್ದರು. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಭಾಮಾ, ಪರೋಕ್ಷವಾಗಿ ನಾನೀಗ ಒಂಟಿ ಎಂದು ಬರೆದುಕೊಂಡಿದ್ದಾರೆ. ಮಗಳು ಗೌರಿ ಜೊತೆಗಿನ ಫೋಟೋವನ್ನು ಹಂಚಿಕೊಂಡ ಭಾಮಾ, ''ನಾನು ‘ಸಿಂಗಲ್ ಮದರ್’ ಆಗುವವರೆಗೆ ನಾನು ಎಷ್ಟು ಬಲಶಾಲಿ ಎಂದು ನನಗೆ ತಿಳಿದಿರಲಿಲ್ಲ. ಮತ್ತು ಬಲಶಾಲಿಯಾಗುವುದು ನನ್ನ ಏಕೈಕ ಆಯ್ಕೆಯಾಗಿದೆ'' ಎಂದು ಬರೆದುಕೊಂಡಿದ್ದಾರೆ.