ಬೆಂಗಳೂರು, ಮೇ.7(DaijiworldNews/AK):ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಜೈಲು ಸೇರಿದ್ದ ‘ಬಿಗ್ ಬಾಸ್’ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮದುವೆ ಮತ್ತು ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ನಟಿ ಮಾತನಾಡಿದ್ದಾರೆ.ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ನಟಿ ಇದೀಗ ಅಭಿಮಾನಿಗಳ ಜೊತೆ ಪ್ರಶ್ನಾವಳಿ ಮಾಡಿದ್ದಾರೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ನೀವು ಯಾವಾಗ ಮದುವೆಯಾಗುತ್ತೀರಾ? ಎಂದು ಸೋನುಗೆ ಪ್ರಶ್ನೆ ಕೇಳಿದ್ದಾರೆ. ನಾನು ಮದುವೆ ಬಗ್ಗೆ ಪ್ಲ್ಯಾನ್ ಇಲ್ಲ. ನಾನು ಮದುವೆ ಆಗಬಾರದು ಎಂದುಕೊಂಡಿದ್ದೇನೆ.
ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂದು ಆಸಕ್ತಿ ಇತ್ತು. ಈಗ ಇಲ್ಲ, ಆದರೆ ರಾಜಕೀಯಕ್ಕೆ ಹೋಗಬೇಕು. ಅಲ್ಲಿ ಕಾಣಿಸಿಕೊಳ್ಳಬೇಕು ಎಂದು ಪ್ಲ್ಯಾನ್ ಇದೆ. ಮುಂದಿನ ದಿನಗಳಲ್ಲಿ ನೋಡೋಣ ಎಂದು ಸೋನು ಮಾತನಾಡಿದ್ದಾರೆ.