ಮುಂಬೈ, ಮೇ.6(DaijiworldNews/AK):ಬಾಲಿವುಡ್ ನಟಿ ಕಂಗನಾ ರಣಾವತ್ ಬಾಲಿವುಡ್ ಬಿಡುವ ಬಗ್ಗೆ ಮಾತನಾಡಿದ್ದಾರೆ. ಸದ್ಯ ಲೋಕಸಭಾಚುನಾವಣೆಯಲ್ಲಿ ಸ್ಪರ್ಧಿಸಿರುವ ಅವರು, ಈ ಚುನಾವಣೆಯಲ್ಲಿ ಗೆದ್ದರೇ ತಾವು ಬಾಲಿವುಡ್ ತೊರೆದು, ಸಂಪೂರ್ಣವಾಗಿ ಜನರ ಸೇವೆಗೆ ನಿಲ್ಲುವುದಾಗಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.ಒಂದು ಕಡೆ ಕಂಗನಾ ರಣಾವತ್ ಗೆಲ್ಲಲೇಬೇಕು ಎಂದು ಹಠತೊಟ್ಟು ಹಗಲು ರಾತ್ರಿ ಎನ್ನದೇ ಜನರ ಮುಂದೆ ನಿಲ್ಲುತ್ತಿದ್ದಾರೆ. ಮತ್ತೊಂದು ಕಡೆ ಕಂಗನಾ ವಿರುದ್ಧ ಅನೇಕರು ಟೀಕೆ ಮಾಡುತ್ತಿದ್ದಾರೆ.
ಕಂಗನಾ ರಣಾವತ್ ಜೊತೆ ಒಟ್ಟೊಟ್ಟಿಗೆ ಕೆಲಸ ಮಾಡಿದ ಸ್ವರಾ ಭಾಸ್ಕರ್ ಟೀಕಿಸಿದ್ದಾರೆ. ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದವರು. ಆದರೆ ಈಗ ಇವರಿಬ್ಬರು ಹಾವು ಮುಂಗಸಿಯಂತೆ ಕಿತ್ತಾಟ ಈಗಲೂ ಮುಂದುವರೆದಿದೆ.
ಕಂಗನಾ ಈಗ ಲೋಕಸಭಾ ಕಣದಲ್ಲಿ ಇದ್ದಾರೆ. ಅದಕ್ಕೂ ಮುನ್ನ ಆಡಳಿತ ಪಕ್ಷದ ಪರವಾಗಿ ಸಾಕಷ್ಟು ಮಾತನಾಡಿದ್ದಾರೆ. ಈ ಕುರಿತಂತೆ ಸ್ವರಾ ಅಪಸ್ವರ ಎತ್ತಿದ್ದಾರೆ.