ಬೆಂಗಳೂರು, ಮೇ.5(DaijiworldNews/AK):ನಟ ಯಶ್ ಅವರ 19 ನೇ ಚಿತ್ರ ಟಾಕ್ಸಿಕ್ ಸಿದ್ದತೆ ಜೋರಾಗಿದೆ. ಈ ಚಿತ್ರವನ್ನು ಮಲಯಾಳಂನ ಗೀ ತು
ಮೋಹನ್ದಾಸ್ ನಿರ್ದೇಶಿಸುತ್ತಿದ್ದಾರೆ.
ಆದರೆ ಈ ಸಿನಿಮಾದ ನಾಯಕಿ ಪಾತ್ರದ ಆಯ್ಕೆ ಇನ್ನೂ ಅಂತ್ಯವಾಗಿಲ್ಲ.. ಯಶ್ ಎದುರಾಗಿ ಮುಖ್ಯ ಪಾತ್ರದಲ್ಲಿ ಬಾಲಿವುಡ್ ಬೆಬೋ ಕರೀನಾ ಕಪೂರ್ ನಟಿಸಬೇಕಿತ್ತು. ಆದರೆ, ದಿನಾಂಕ ಹೊಂದಾಣಿಕೆ ಯಾಗದೇ ಅವರು ಈ ಚಿತ್ರಕ್ಕೆ ಕಾಲ್ಶೀ ಟ್ ಕೊಡಲು ಆಗುತ್ತಿಲ್ಲ. ಇದರಿಂದ ಅವರು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಕಿಯಾರಾ ಅಡ್ವಾಣಿ ಅವರಿಗೂ ಚಿತ್ರ ತಂಡ ಸಂಪರ್ಕ ಮಾಡಿತ್ತು. ಆದರೆ, ಅವರೂ ಸಹ ಒಪ್ಪಿರಲಿಲ್ಲ. ಬಳಿಕ ಈಗ ಗೀತು ಮೋಹನ್ದಾಸ್ ಅವರು ಕರೀನಾ ಅವರನ್ನು ಕೈ ಬಿಟ್ಟು ಇದೀಗ ಬಹುಭಾಷಾ ನಟಿ ತಮಿಳಿನ ನಯನತಾರಾ ಅವರನ್ನು ಸಂಪರ್ಕಿಸಿದ್ದು, ಕಥೆ ಕೇಳಿರುವ ನಯನತಾರಾ ಉತ್ಸುಕರಾಗಿದ್ದು ಟಾಕ್ಸಿಕ್ ಚಿತ್ರದಲ್ಲಿ ಯಶ್ ಎದುರಾಗಿ ಅವರೇ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ.