ಮುಂಬೈ, ಮೇ.3(DaijiworldNews/AA): ಇತ್ತೀಚೆಗಷ್ಟೇ ನಟಿ ಅದಿತಿ ರಾವ್ ಹೈದರ್ ಮತ್ತು ತೆಲುಗು ನಟ ಸಿದ್ದಾರ್ಥ್ ಅವರು ನಿಶ್ಚಿತಾರ್ಥದ ಮಾಡಿಕೊಂಡಿರುವ ವಿಚಾರ ಬಹಿರಂಗವಾಗಿತ್ತು. ಇದೀಗ ಈ ವಿಚಾರ ಬಹಿರಂಗವಾಗಲು ಕಾರಣ ನನ್ನ ತಾಯಿ ಎಂದು ನಟಿ ಅದಿತಿ ತಿಳಿಸಿದ್ದಾರೆ.
ತಮ್ಮ ನಿಶ್ಚಿತಾರ್ಥದ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ಅದಿತಿ, ನಾನು ನಿಶ್ಚಿತಾರ್ಥ ಮಾಡಿಕೊಂಡ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಆದರೂ, ಗೊತ್ತಾಗಿತ್ತು. ಅಮ್ಮನಿಗೆ ಪದೇ ಪದೇ ಕರೆ ಮಾಡಿ ಕೇಳುತ್ತಿದ್ದರು. ಹಾಗಾಗಿ ಅವರೇ ಈ ವಿಷಯವನ್ನು ತಿಳಿಸಿ ಬಿಡು ಎಂದಿದ್ದರು ಅವರು ಹೇಳಿದ್ದಾರೆ.
ನಟಿ ಅದಿತಿ ಹಾಗೂ ನಟ ಸಿದ್ದಾರ್ಥ್ ನಿಶ್ಚಿತಾರ್ಥವಾಗುವ ವಿಚಾರವನ್ನು ಆಪ್ತರಿಗೂ ತಿಳಿಸದೆ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರವನ್ನು ಮುಗಿಸಿದ್ದರು. ಆದರೆ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಈ ಬಗ್ಗೆ ಯಾರೂ ಸ್ಪಷ್ಟನೆ ನೀಡಿರಲಿಲ್ಲ. ಬಳಿಕ ನಟಿಯೇ ತಮ್ಮ ನಿಶ್ಚಿತಾರ್ಥದ ವಿಚಾರವನ್ನು ಬಹಿರಂಗ ಪಡಿಸಿದ್ದರು.