ಚೆನ್ನೈ, ಮೇ.1(DaijiworldNews/AK):ಟಾಲಿವುಡ್ ನಟಿ ಸಾಯಿ ಪಲ್ಲವಿ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡ್ಯಾನ್ಸಿಂಗ್ ಕ್ವೀನ್ ಎಂದೇ ಪ್ರಖ್ಯಾತರಾದ ಸಾಯಿ ಪಲ್ಲವಿ ಬಗ್ಗೆ ಇದೀಗ ಹೊಸ ವಿಚಾರವೊಂದು ಸುದ್ದಿಯಾಗಿದೆ. ನಟಿ ಮೊಡವೆ ನಿವಾರಣೆಗಾಗಿ ಸರ್ಜರಿ ಮೊರೆ ಹೋದ್ರಾ ಎಂಬ ವಿಚಾರ ಚರ್ಚೆಯಾಗುತ್ತಿದೆ.
ಪ್ರೇಮಂ’ ಚಿತ್ರದ ಮೂಲಕ ಸಾಯಿ ಪಲ್ಲವಿ ಮಾಲಿವುಡ್ಗೆ ಕಾಲಿಟ್ಟಾಗ ಮುಖ ತುಂಬಾ ಮೊಡವೆಗಳು ಇದ್ದವು. ಆದರೆ ಈಗ ಅವರ ಮುಖದಲ್ಲಿ ಮೊಡವೆಗಳು ಮಾಯವಾಗಿ ಬಿಟ್ಟಿದೆ. ಹೀಗಾಗಿ ಪಲ್ಲವಿ ಸರ್ಜರಿ ಮಾಡಿಸಿದ್ರಾ ಎಂಬ ಪ್ರಶ್ನೆ ನಟಿಗೆ ಸಂದರ್ಶನವೊಂದರಲ್ಲಿ ಕೇಳಲಾಗಿದೆ.
ಅದಕ್ಕೆ ನಟಿ ಪ್ರತಿಕ್ರಿಯಿಸಿ ದಪ್ಪ ಕೂದಲಿಗಾಗಿ ನಾನು ಹೆಚ್ಚಾಗಿ ಪೋಷಕಾಂಶ ಆಹಾರವನ್ನು ಸೇವಿಸುತ್ತೇನೆ. ನಂತರ ಅಲೋವರಾ ಜೆಲ್ ಅನ್ನು ಹಚ್ಚಿಕೊಳ್ಳುತ್ತೇನೆ ಎಂದು ನಟಿ ವಿವರಿಸಿದ್ದಾರೆ. ಈ ಮೂಲಕ ಸರ್ಜರಿ ವಿಚಾರ ನಟಿ ಸ್ಪಷ್ಟನೆ ನೀಡಿದ್ದಾರೆ.