ಮುಂಬೈ, ಏ.30(DaijiworldNews/AA): ಮುಖದ ಮೇಲಿನ ಮೊಡವೆಯಿಂದ ಒಂದು ದೊಡ್ಡ ಅವಕಾಶ ತಪ್ಪಿ ಹೋಗಿತ್ತು ಎಂದು ಬಾಲಿವುಡ್ ನಟಿ, ಮಾಡೆಲ್ ಮನ್ನಾರಾ ಚೋಪ್ರಾ ಹೇಳಿದ್ದಾರೆ.
ಕೆಲವು ಸಿನಿಮಾಗಳಲ್ಲಿ ನಟಿಸುವ ಮೂಲಕ, ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸುವ ಮೂಲಕ ನಟಿ ಮನ್ನಾರ್ ಚೋಪ್ರಾ ಜನರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಮನ್ನಾರ್ ಚೋಪ್ರಾ ಅವರು ಹಲವು ಜಾಹೀರಾತುಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ನಟಿ ಒಂದೇ ಒಂದು ಮೊಡವೆಯಿಂದ ದೊಡ್ಡ ಅವಕಾಶವೊಂದನ್ನು ಕಳೆದುಕೊಂಡಿದ್ದರು.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮನ್ನಾರ್ ಚೋಪ್ರಾ ಅವರು ಜಾಹೀರಾತುಗಳಲ್ಲಿ ನಟಿಸಲು ಹಲವು ಸುತ್ತುಗಳ ಆಡಿಷನ್ ನೀಡಿದ್ದರು. ಕೊನೇ ಹಂತದವರೆಗೂ ಅವರು ಆಯ್ಕೆಯಾಗಿದ್ದರು. ಆದರೆ ಇನ್ನೇನು ಶೂಟಿಂಗ್ ಮಾಡಬೇಕು ಎಂಬಷ್ಟರಲ್ಲಿ ಅವರ ಹಣೆಯ ಮೇಲೆ ಮೊಡವೆ ಆಗಿತ್ತು. ಈ ಮೊಡವೆ ಶೂಟಿಂಗ್ ಗೆ ಹೋದಾಗ ಮೊಡವೆ ಜಾಸ್ತಿ ಆಗಿತ್ತು. ಅದನ್ನು ಮರೆಮಾಚಲು ಅವರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಮನೆಗೆ ವಾಪಸ್ ಹೋಗುವಂತೆ ಹೇಳಿದ್ದರು. ಅದು ನನ್ನ ಜೀವನದಲ್ಲಿ ಮೊದಲ ರಿಜೆಕ್ಷನ್’ ಎಂದು ಅವರು ತಿಳಿಸಿದ್ದಾರೆ.