ಚೆನ್ನೈ, ಏ.28(DaijiworldNews/AA): ಇತ್ತೀಚೆಗಷ್ಟೇ ಮಾಣಿಕ್ಯ ಸಿನಿಮಾದ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ನಿಕೋಲಾಯ್ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ವರಲಕ್ಷ್ಮಿ ಅವರ ಭಾವಿ ಪತಿಯನ್ನು ಟ್ರೋಲ್ ಮಾಡಲಾಗಿತ್ತು. ಇದೀಗ ಟ್ರೋಲ್ ಮಾಡಿದವರಿಗೆ ನಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಿಕೋಲಾಯ್ ಸಚ್ದೇವ್ ಅವರಿಗೆ ವರಲಕ್ಷ್ಮಿ ಅವರೊಂದಿಗೆ 2ನೇ ಮದುವೆಯಾಗಿದ್ದು, ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುತ್ತಾರೆ. ಇದೀಗ ನಿಕೋಲಾಯ್ ಜೊತೆ 2ನೇ ಮದುವೆ ಆಗಲು ನಟಿ ತಯಾರಾಗಿದ್ದಾರೆ.
ಟ್ರೋಲ್ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಟಿ ವರಲಕ್ಷ್ಮಿ ನನ್ನ ತಂದೆ ಕೂಡ 2ನೇ ಮದುವೆ ಆದರು. ಅದರಲ್ಲಿ ಯಾವ ತಪ್ಪಿಲ್ಲ. ನನ್ನ ಕಣ್ಣಿಗೆ ನಿಕ್ ಅವರು ಹ್ಯಾಂಡ್ಸಮ್ ಆಗಿದ್ದಾರೆ. ನಮ್ಮ ಸಂಬಂಧದ ಬಗ್ಗೆ ನೆಗೆಟಿವ್ ಆಗಿ ಮಾತನಾಡುವವರ ಬಗ್ಗೆ ನಾನು ಎಂದಿಗೂ ಕೇರ್ ಮಾಡುವುದಿಲ್ಲ ಎಂದು ಉತ್ತರಿಸಿದ್ದಾರೆ.