ಕಾಸರಗೋಡು, ಏ.27(DaijiworldNews/AA): ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಸಿನಿಮಾ ಶೂಟಿಂಗ್ ಗಾಗಿ ಕಾಸರಗೋಡಿಗೆ ಆಗಮಿಸಿದ್ದು, ನೆಚ್ಚಿನ ನಟಿಯನ್ನು ಕಾಣಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.
ಕಾಸರಗೋಡಿನ ಸೀತಂಗೋಳಿ ಸಮೀಪದ ಶೇಣಿಯಲ್ಲಿ ಸನ್ನಿ ಲಿಯೋನ್ ಅವರ ಹಿಂದಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಹೀಗಾಗಿ ಅವರು ಕಾಸರಗೋಡಿಗೆ ಬಂದಿದ್ದಾರೆ.
ಶೇಣಿಯ ಶಾಲೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಹಿನ್ನೆಲೆ ಮಾದಕ ನಟಿಯ ಅಭಿನಯವನ್ನು ನೋಡಲು ರಸ್ತೆ ತುಂಬಾ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ ಎನ್ನಲಾಗಿದೆ.