ಮುಂಬೈ, ಏ. 23(DaijiworldNews/AK):ಬಾಲಿವುಡ್ ನಟ ಶಾಹಿದ್ ಕಪೂರ್ ಬ್ಯುಸಿ ಶೆಡ್ಯೂಲ್ ನಡುವೆ ಕುಟುಂಬಕ್ಕೆ ಸಮಯ ನೀಡುತ್ತಾರೆ. ಪತ್ನಿ ಮೀರಾ ಜೊತೆ ಹೋಟೆಲ್ವೊಂದಕ್ಕೆ ನಟ ಭೇಟಿ ನೀಡಿದ್ದರು. ಈ ವೇಳೆ, ಪತ್ನಿ ಫೋಟೋ ತೆಗೆಯಲು ಬಂದವರ ಮೇಲೆ ಶಾಹಿದ್ ಹರಿಹಾಯ್ದಿದ್ದಾರೆ.
ಮುಂಬೈನ ಖಾಸಗಿ ಹೋಟೆಲ್ವೊಂದರಲ್ಲಿ ಪತ್ನಿ ಜೊತೆ ಶಾಹಿದ್ ಊಟ ಸವಿದಿದ್ದಾರೆ. ಬಳಿಕ ಹೋಟೆಲ್ನಿಂದ ಹೊರಬರುವ ವೇಳೆ ಪಾಪರಾಜಿಗಳು ಫೋಟೋಗಾಗಿ ಮುಗಿಬಿದ್ದಿದ್ದಾರೆ. ಇದು ಶಾಹಿದ್ಗೆ ಕಿರಿಕಿರಿ ಆಗಿದೆ. ಬಳಿಕ ಪತ್ನಿ ಫೋಟೋ ತೆಗೆಯಲು ಬಂದಿದ್ದು ನಟನಿಗೆ ಕೋಪ ತರಿಸಿದೆ. ನೀವು ಇದನ್ನು ನಿಲ್ಲಿಸುತ್ತೀರಾ ಎಂದು ನಟ ಕೂಗಾಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ನಟನಿಗೆ ಸಕ್ಸಸ್ ತಲೆಗೆ ಏರಿದೆ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.