ತಿರುವನಂತಪುರಂ, ಏ.22(DaijiworldNews/AA): ಮಲಯಾಳಂನ ಖ್ಯಾತ ನಟಿ ಶೋಭನಾ ಹಾಗೂ ಮೋಹನ್ ಲಾಲ್ ಅವರು 56ನೇ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ನಟಿ ಶೋಭನಾ ಅವರು ಹೊಸ ದಾಖಲೆಯನ್ನು ಮಾಡಲಿದ್ದಾರೆ.
ನಟಿ ಶೋಭನಾ ಹಾಗೂ ಮೋಹನ್ ಲಾಲ್ ಅವರು ಈವರೆಗೆ 55 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಹಲವು ವರ್ಷಗಳ ಕಾಲ ಸಿನಿಮಾರಂಗದಿಂದ ದೂರ ಉಳಿದಿದ್ದ ಶೋಭನಾ ಅವರು ಇದೀಗ ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗುತ್ತಿದ್ದಾರೆ. ಇನ್ನು ಚಿತ್ರರಂಗಕ್ಕೆ ರಿಎಂಟ್ರಿ ನೀಡುತ್ತಿರುವಾಗಲೇ ಶೋಭನಾ ಅವರು ದಾಖಲೆ ಬರೆಯಲು ತಯಾರಾಗಿದ್ದಾರೆ.
ಸದ್ಯಕ್ಕೆ ಸಿನಿಮಾಗೆ ತಾತ್ಕಾಲಿನ ಶೀರ್ಷಿಕೆಯನ್ನು ಇಡಲಾಗಿದೆ. ಈ ಚಿತ್ರವನ್ನು ಆಪರೇಷನ್ ಜಾವಾ ಖ್ಯಾತಿಯ ತರುಣ್ ಮೂರ್ತಿ ನಿರ್ದೇಶಿಸುತ್ತಿದ್ದಾರೆ. 7 ವರ್ಷಗಳ ಬಳಿಕ ಶೋಭನಾ ಮತ್ತೆ ಸಿನಿ ರಂಗಕ್ಕೆ ಮರಳುತ್ತಿರುವುದರಿಂದ ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.