ಬೆಂಗಳೂರು, ಏ. 21(DaijiworldNews/AA): ಬಹುಭಾಷಾ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಕೆನಡಾದ ಟೊರೆಂಟೊದ ರಿಚ್ಯಂಡ್ ಗ್ಯಾಬ್ರಿಯಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ಸಂಗೀತ ಕ್ಷೇತ್ರದಲ್ಲಿ ವಿಜಯ್ ಪ್ರಕಾಶ್ ಅವರು ಮಾಡಿದ ಸಾಧನೆಯನ್ನು ಗುರುತಿಸಿ ವಿವಿಯು ಗೌರವ ಡಾಕ್ಟರೇಟ್ ನೀಡುತ್ತಿದೆ. ಇನ್ನು ವಿಜಯ್ ಪ್ರಕಾಶ್ ಅವರೊಂದಿಗೆ ತಮಿಳು ಗಾಯಕ ಶ್ರೀನಿವಾಸ್ ಅವರಿಗೂ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯ್ ಪ್ರಕಾಶ್ ಅವರು, ನನ್ನ ಮೊದಲ ಗೌರವ ಡಾಕ್ಟರೇಟ್ ಅನ್ನು ಗ್ಯಾಬ್ರಿಯಲ್ ವಿಶ್ವವಿದ್ಯಾಲಯದಿಂದ ಶ್ರೀನಿವಾಸ್ ಅವರೊಂದಿಗೆ ಸ್ವೀಕರಿಸುತ್ತಿರುವುದು ಸಂತೋಷ ತಂದಿದೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಕೆಲ ಫೋಟೊಗಳನ್ನೂ ಹಂಚಿಕೊಂಡಿದ್ದಾರೆ.