ಬೆಂಗಳೂರು, ಏ.21(DaijiworldNews/AA): ನಟ ಸುದೀಪ್ ಅಭಿನಯದ 'ವೀರ ಮದಕರಿ' ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿರುವ ಬಾಲನಟಿ ಜೆರುಶಾ ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಮಹೇಶ್ ಬಾಬು ಅವರ ಅಪರೂಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ನೀಡಲಿದ್ದಾರೆ. ಜೆರುಶಾ ಅವರಿಗೆ ಸ್ಮೈಲ್ ಗುರು ರಕ್ಷಿತ್ ನಾಯಕನಾಗಿ ತೆರೆ ಹಂಚಿಕೊಳ್ಳಲಿದ್ದಾರೆ.
ಈಗಾಗಲೇ ಜೆರುಶಾ 'ವೀರ ಮದಕರಿ' ಚಿತ್ರದಲ್ಲಿ ಬಾಲನಟಿಯಾಗಿ, ಜಾಹೀರಾತುಗಳಲ್ಲೂ ನಟಿಸಿದ್ದಾರೆ. ಜೊತೆಗೆ ರಂಗಭೂಮಿ ಕಲಾವಿದೆಯಾಗಿರುವ ಅವರು ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇನ್ನು ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ನಟಿಸಲಿರುವ ಅವರ ಅದೃಷ್ಟ ಹೇಗಿದೆ ಎಂದು ಕಾದುನೋಡಬೇಕಿದೆ.