ಬೆಂಗಳೂರು, ಏ. 20(DaijiworldNews/AA): ತೆಲುಗಿನ ಸ್ಟಾರ್ ನಟ ಪ್ರಭಾಸ್ ಅಭಿನಯಿಸಿರುವ ‘ಸಲಾರ್’ ಸಿನಿಮಾ ಸೂಪರ್ ಹಿಟ್ ಆಗಿದ್ದು, ಈ ಸಿನಿಮಾದಲ್ಲಿ ಪ್ರಭಾಸ್ ಬೈಕ್ ಸಖತ್ ಸದ್ದು ಮಾಡಿತ್ತು. ಇದೀಗ ಈ ಬೈಕ್ ಗೆಲ್ಲುವ ಅವಕಾಶವನ್ನು ಹೊಂಬಾಳೆ ಫಿಲ್ಮ್ಸ್ ನೀಡಿದೆ.
ಬಾಕ್ಸ್ ಆಫೀಸ್ ನಲ್ಲಿ 700 ಕೋಟಿ ರೂ. ಕೊಳ್ಳೆ ಹೊಡೆದ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಬಳಸಿದ ಬೈಕ್ ಅನ್ನು ಭಿನ್ನವಾಗಿ ಡಿಸೈನ್ ಮಾಡಲಾಗಿತ್ತು. ಹೀಗಾಗಿಯೇ ಈ ಬೈಕ್ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿತ್ತು. ಇದೀಗ ಈ ಬೈಕ್ ಗೆಲ್ಲೋ ಅವಕಾಶವನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್, ಬೈಕ್ ಗೆಲ್ಲಲು ಏನು ಮಾಡಬೇಕು ಎಂಬುದನ್ನು ಕೂಡ ತಿಳಿಸಿದೆ.
‘ಗಿವ್ಅವೇ ಕ್ಯಾಂಪೇನ್’ನ ಹೊಂಬಾಳೆ ಫಿಲ್ಮ್ಸ್ ಪ್ರಾರಂಭಿಸಿದ್ದು, ಓರ್ವ ಅದೃಷ್ಟಶಾಲಿಗೆ ಈ ಬೈಕ್ ಸಿಗಲಿದೆ. ಇದೇ ಏಪ್ರಿಲ್ 21ರಂದು ಸಲಾರ್ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾವನ್ನು ನೋಡಿದ ವೀಕ್ಷಕರು ಚಿತ್ರದಲ್ಲಿ ಎಷ್ಟು ಬಾರಿ ಬೈಕ್ ಬಂದು ಹೋಗುತ್ತದೆ ಎಂಬುದನ್ನು ತಿಳಿಸಬೇಕು. ಹೀಗೆ ಸರಿಯಾಗಿ ಉತ್ತರ ನೀಡಿದವರು ಬೈಕ್ ಗೆಲ್ಲಲು ಅರ್ಹರಾಗಿರುತ್ತಾರೆ ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.