ಚೆನ್ನೈ, ಏ. 19(DaijiworldNews/AA): ತಮಿಳಿನ ಸ್ಟಾರ್ ನಟ ಸೂರ್ಯ ಹಾಗೂ ಸ್ಟಾರ್ ನಟಿ ಜ್ಯೋತಿಕಾ ದಂಪತಿ 18 ವರ್ಷದ ಬಳಿಕ ಸಿನಿಮಾದಲ್ಲಿ ಒಂದಾಗುತ್ತಿದ್ದು, ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ 7 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಹೊಸ ಚಿತ್ರವೊಂದನ್ನು ನಿರ್ಮಿಸಲು ಸ್ಟಾರ್ ಡೈರೆಕ್ಟರ್ ಒಬ್ಬರು ಯೋಜನೆ ರೂಪಿಸುತ್ತಿದ್ದಾರೆ.
ಇವರಿಬ್ಬರನ್ನು ಒಟ್ಟಾಗಿ ತೆರೆಯ ಮೇಲೆ ಕರೆತರುವ ಉದ್ದೇಶದಿಂದ ಈಗಾಗಲೇ ನಟ, ನಟಿ ಇಬ್ಬರನ್ನು ಭೇಟಿಯಾಗಿ ಸಿನಿಮಾ ಕತೆ ಕೂಡ ಹೇಳಿದ್ದಾರೆ. ಈ ಕತೆಗೆ ದಂಪತಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ, ಈ ಜೋಡಿ ಅಧಿಕೃತ ಮಾಹಿತಿ ನೀಡುವುದು ಬಾಕಿ ಇದೆ.