ಮುಂಬೈ, ಏ. 18(DaijiworldNews/AA): ಸಿನಿಮಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮುಡಿಗೆ ಪ್ರತಿಷ್ಠಿತ 'ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ'ಯು ಸೇರಲಿದೆ.
ಬಿಗ್ ಬಿ ಗೆ ಈ ಪ್ರಶಸ್ತಿಯನ್ನು ಮಂಗೇಶ್ಕರ್ ಕುಟುಂಬವು ನೀಡುತ್ತಿದೆ. ಭಾರತೀಯ ಸಿನಿಮಾ, ಸಂಸ್ಕೃತಿ ಮತ್ತು ಸಮಾಜದ ಮೇಲೆ ಬಿಗ್ ಬಿ ಬೀರಿದ ಪ್ರಭಾವವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ಮೂಲಕ ಪ್ರಶಸ್ತಿ ಘೋಷಿಸಲಾಗಿತ್ತು. ಇನ್ನು ಈ ಮೊದಲು ನರೇಂದ್ರ ಮೋದಿ ಹಾಗೂ ಗಾಯಕಿ ಆಶಾ ಭೋಂಸ್ಲೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಇದೀಗ ಈ ಸಾಲಿಗೆ ಅಮಿತಾಭ್ ಬಚ್ಚನ್ ಸೇರ್ಪಡೆಗೊಳ್ಳುತ್ತಿದ್ದಾರೆ.