ಮುಂಬೈ, ಏ.16(DaijiworldNews/AK): ಇತ್ತೀಚೆಗೆ ತಾವು ತಾಯಿಯಾಗಿರುವ ಗುಡ್ ನ್ಯೂಸ್ ನ್ನು ದೀಪಿಕಾ ಪಡುಕೋಣೆ ಕೊಟ್ಟಿದ್ದಾರೆ. ಇದೀಗ ಪ್ರೆಗ್ನೆಂಟ್ ಆಗಿರುವ ದೀಪಿಕಾ ‘ಸಿಂಗಂ ಅಗೈನ್’ ಸಿನಿಮಾದ ಶೂಟಿಂಗ್ಗೆ ತೆರಳಿದ್ದಾರೆ.
ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳಿಗೆ ಗರ್ಭಿಣಿ ದೀಪಿಕಾ ಸಾಥ್ ನೀಡುತ್ತಿದ್ದಾರೆ. ಸದ್ಯ ಚಿತ್ರೀಕರಣಕ್ಕೆ ಹಾಜರಿ ಹಾಕಿರುವ ದೀಪಿಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಠಾಣ್& ‘ಜವಾನ್’ ಸಿನಿಮಾಗಳ ಸಕ್ಸಸ್ ನಂತರ ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್ನ ಟಾಪ್ ನಟಿಯಾಗಿದ್ದಾರೆ. ತಾಯಿಯಾಗುತ್ತಿರುವ ಜೊತೆಗೆ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ನಟಿ ಕೈಬಿಟ್ಟಿಲ್ಲ.
‘ಸಿಂಗಂ ಅಗೈನ್’ ಚಿತ್ರದಲ್ಲಿ ದೀಪಿಕಾ ಪೊಲೀಸ್ ಅಧಿಕಾರಿ ನಟಿಸುತ್ತಿದ್ದಾರೆ. ಕಳೆದ ವರ್ಷದ ಅಂತ್ಯದಿಂದಲೇ ಅವರ ಭಾಗದ ಚಿತ್ರೀಕರಣ ಶುರುವಾಗಿತ್ತು. ಪ್ರೆಗ್ನೆಂಟ್ ಆಗಿರುವ ದೀಪಿಕಾ ವಿಶ್ರಾಂತಿ ಪಡೆಯಬೇಕಿತ್ತು. ಆದರೆ ಸಿನಿಮಾಗೆ ತೊಂದರೆ ಆಗಬಾರದು ಎಂದು ಕೊಟ್ಟ ಮಾತಿನಂತೆ, ಚಿತ್ರೀಕರಣವನ್ನು ಮುಗಿಸಿ ಕೊಡಲು ಮತ್ತೆ ಶೂಟಿಂಗ್ಗೆ ನಟಿ ಭಾಗಿಯಾಗಿದ್ದಾರೆ.