ಬೆಂಗಳೂರು, ಏ.16(DaijiworldNews/AK):ದ್ವಾರಕೀಶ್ ಮತ್ತು ರಜನಿಕಾಂತ್ ಬಹುಕಾಲದ ಅತ್ಮೀಯ ಗೆಳೆಯರು. ಹೌದು ದ್ವಾರಕೀಶ್ ಹೇಳಿದವರಿಗೆ ರಜನಿಕಾಂತ್ ಕಾಲ್ ಶೀಟ್ ಕೊಡುತ್ತಿದ್ದರು ಎಂದು ಸ್ವತಃ ದ್ವಾರಕೀಶ್ ಈ ಹಿಂದೆ ಹೇಳಿದ್ದಾರೆ.
ದ್ವಾರಕೀಶ್ ನಿರ್ಮಾಣ ಮಾಡಿದ ಅಡ್ಡ ವಾರಿಸು ಸಿನಿಮಾದಲ್ಲಿ ರಜನಿಕಾಂತ್ ನಟಿಸಿದ್ದರು. ನೀ ಬರೆದ ಕಾದಂಬರಿ, ಸೇರಿದಂತೆ ಹಲವು ಚಿತ್ರಗಳಲ್ಲಿಇಬ್ಬರೂ ಕೆಲಸ ಮಾಡಿದ್ದಾರೆ. ಹಾಗೆ ಇವರ ಸ್ನೇಹ ಭಾಂದವ್ಯವಾಗಿತ್ತು.
ಇಂದು ತಮ್ಮಿಬ್ಬರ ಸ್ನೇಹವನ್ನು ರಜನಿಕಾಂತ್ ನೆನಪಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಜನಿ, ನನ್ನ ಬಹುಕಾಲದ ಆತ್ಮೀಯ ಗೆಳೆಯ ದ್ವಾರಕೀಶ್ ಅವರ ನಿಧನ ನನಗೆ ಅತೀ ನೋವನ್ನು ತಂದಿದೆ.
ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿ, ಆನಂತರ ದೊಡ್ಡ ನಿರ್ಮಾಪಕರು ಹಾಗೂ ನಿರ್ದೇಶಕರಾಗಿ ಬೆಳೆದರು ಹಾಗೂ ಬೆಳೆಸಿದರು. ಅವರ ಅಗಲಿಕೆ ನೋವು ತಂದಿದೆ. ಅವರಿಗೆ ಭಾವ ಪೂರ್ಣ ಸಂತಾಪ ಎಂದು ಬರೆದುಕೊಂಡಿದ್ದಾರೆ.