ಮೈಸೂರು,ಮೇ4(DaijiworldNews/AZM):- ಬಹುಭಾಷಾ ಖ್ಯಾತಿ ಗಾಯಕಿ ಎಸ್.ಜಾನಕಿ ಅವರು ಕಾಲು ಜಾರಿ ಬಿದ್ದು ಮೂಳೆ ಮುರಿದಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗಿಂದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.
ನಗರದಲ್ಲಿರುವ ಸಂಬಂಧಿಕರ ಮನೆಗೆ ಕಳೆದ ಮೂರು ದಿನಗಳ ಹಿಂದೆ ಬಂದ ಜಾನಕಿಯವರು,ಮನೆಯಲ್ಲಿ ಅಡ್ಡಾಡುತ್ತಿದ್ದ ವೇಳೆ, ಕಾಲು ಜಾರಿಬಿದ್ದು ಸೊಂಟದ ಭಾಗದಲ್ಲಿ ಸಣ್ಣ ಫ್ರಾಕ್ಚರ್ ಆಗಿತ್ತು. ಹಾಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ಇಂದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ.ನಾಳೆಯೊಳಗೆ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದು, ಅವರಿಗೆ ಕೆಲದಿನಗಳ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಿದ್ದಾರೆ.
ಎಸ್ ಜಾನಕಿ ಅವರು ದಕ್ಷಿಣದಲ್ಲೇ ಒಟ್ಟು 48,000 ಹಾಡುಗಳನ್ನು ಹಾಡಿದ್ದಾರೆ. 1957ರಲ್ಲಿ ಹಾಡಲು ಆರಂಭಿಸಿದ ಅವರು ಈಗ ಹಾಡುವುದನ್ನು ನಿಲ್ಲಿಸಿದ್ದಾರೆ. ವಿದೇಶಿ ಸೇರಿದಂತೆ ಹದಿನೈದು ಭಾಷೆಗಳಲ್ಲಿ ಹಾಡಿ ಎಸ್ ಜಾನಕಿ ಖ್ಯಾತಿ ಪಡೆದಿದ್ದಾರೆ.