ಮುಂಬೈ, ಏ. 14(DaijiworldNews/AA): ಸೌತ್ ಸಿನಿಮಾಗಳಲ್ಲಿ ಮಿಂಚಿ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಪೂಜಾ ಹೆಗ್ಡೆ ಅವರು ಇದೀಗ ಮುಂಬೈನಲ್ಲಿ 45 ಕೋಟಿ ರೂ. ಲಕ್ಷುರಿ ಮನೆಯೊಂದನ್ನು ಖರೀದಿಸಿದ್ದಾರೆ.
ಸಿನಿಮಾ ಕೆಲಸಗಳ ಸಲುವಾಗಿ ಪೂಜಾ ಹೆಗ್ಡೆ ಅವರು ಮುಂಬೈನಲ್ಲೇ ಸೆಟ್ಲ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಮುಂಬೈನ ಬಾಂದ್ರಾದಲ್ಲಿ 45 ಕೋಟಿ ರೂ. ಮೌಲ್ಯದ ಮನೆಯನ್ನು ಖರೀದಿಸಿದ್ದಾರೆ. ಈ ಮನೆಯ ವಿಸ್ತೀರ್ಣ 4000 ಚದರ ಅಡಿ ಇದೆ ಎನ್ನಲಾಗುತ್ತಿದೆ. ಅವರು ಬಾಲಿವುಡ್ ಸ್ಟಾರ್ ನಟಿ- ನಟಿಯರು ವಾಸಿಸುವ ಏರಿಯಾದಲ್ಲಿಯೇ ಮನೆಯನ್ನು ಖರೀದಿಸಿದ್ದಾರೆ.
ಸಮುದ್ರದ ಕಡೆ ಮುಖ ಮಾಡಿರುವ ಈ ಮನೆ ತುಂಬ ಸುಂದರವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇನ್ನು ಹೊಸ ಮನೆಯ ವಿಷಯ ತಿಳಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪೂಜಾ ಹೆಗ್ಡೆಗೆ ಶುಭಕೋರುತ್ತಿದ್ದಾರೆ.