ಹೈದರಾಬಾದ್, ಏ. 18(DaijiworldNews/AA): ಅನೇಕ ನಟ, ನಟಿಯರು ನಟನೆಯ ಜೊತೆಗೆ ಬೇರೆ ಬೇರೆ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇದೀನ ನಟಿ ರಕುಲ್ ಪ್ರೀತ್ ಸಿಂಗ್ ಕೂಡ ಹೋಟೆಲ್ ಉದ್ಯಮ ಪ್ರಾರಂಭಿಸಲು ಸಜ್ಜಾಗಿದ್ದಾರೆ.
ಇತ್ತೀಚೆಗಷ್ಟೇ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಟಿ ರಕುಲ್ ಇದೀಗ ಹೋಟೆಲ್ ಉದ್ಯಮಕ್ಕೂ ಕಾಲಿರಿಸಲಿದ್ದಾರೆ. ರಕುಲ್ ಅವರು ತಮ್ಮ ರೆಸ್ಟೋರೆಂಟ್ ಗೆ ಆರಂಭಮ್ ಎಂದು ಹೆಸರಿಟ್ಟಿದ್ದಾರೆ. ಅವರ ಈ ಹೋಟೆಲ್ ಏ. 16 ರಂದು ಹೈದರಾಬಾದ್ ನಲ್ಲಿ ಪ್ರಾರಂಭವಾಗಲಿದೆ.
ಇನ್ನು ರಕುಲ್ ಅವರು ಹೋಟೆಲ್ ಪ್ರಾರಂಭಿಸುವ ಮುನ್ನ ಹೈದರಾಬಾದ್ ಹಾಗೂ ವಿಶಾಖಪಟ್ಟಣದಲ್ಲಿ ಜಿಮ್ ಕೂಡ ಅನ್ನು ಪ್ರಾರಂಭಿಸಿದ್ದರು.