ಬೆಂಗಳೂರು, ಏ 11 (DaijiworldNews/AA): ನಟ ದುನಿಯಾ ವಿಜಯ್ ಅವರ ಪುತ್ರಿ ಮೋನಿಕಾ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವಾಗಲೇ ಪುತ್ರಿಯ ಹೆಸರನ್ನು ದುನಿಯಾ ವಿಜಯ್ ಬದಲಾಯಿಸಿದ್ದಾರೆ.
ನಟ ದುನಿಯಾ ವಿಜಯ್ 29ನೇ ಚಿತ್ರ 'ಕಾಟೇರ' ದ ಮೂಲಕ ಅವರ ಪುತ್ರಿ ಮೋನಿಕಾ ಅವರು ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ. ಆದರೆ ತನ್ನ ಮಗಳನ್ನು ಇಂಡಸ್ಟ್ರಿಗೆ ಪರಿಚಯಿಸುವ ಮೊದಲೇ ಮೋನಿಕಾ ಬದಲು ರಿತಾನ್ಯಾ ಎಂದು ಹೆಸರಿಟ್ಟಿದ್ದಾರೆ.
ತಂದೆ ಹೊಸ ಹೆಸರಿಡಲು ಕಾರಣ ಬಿಚ್ಚಿಟ್ಟ ಮಗಳು ರಿತಿನ್ಯಾ, ನಾನು ಮೋನಿಕಾ, ನನ್ನ ತಂಗಿ ಮೋನಿಷಾ ಎಲ್ಲರಿಗೂ ಒಂದು ಕನ್ಫೂಷನ್. ಅದರಿಂದ ಕೆಲವು ಬಾರಿ ನನ್ನ ವಿಡಿಯೋಗಳಿಗೆ ತಂಗಿಯ ಹೆಸರು ಹಾಕಿದ್ದು ಇದೆ. ಆ ಗೊಂದಲ ದೂರವಾಗಲೆಂದು ನಾವು ರಿತಾನ್ಯಾ ಹೆಸರನ್ನು ಸೆಲೆಕ್ಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.