ಮುಂಬೈ, ಏ 10(DaijiworldNews/AA): ಕೆಲ ನಟ ಹಾಗೂ ನಟಿಯರು ತಮ್ಮ ಖಾಸಗಿ ಜೀವನವನ್ನು ಬಹಿರಂಗ ಪಡಿಸಲು ಹೆಚ್ಚಾಗಿ ಇಷ್ಟ ಪಡುವುದಿಲ್ಲ. ಆದರೆ ಅಂತವರ ವಿಷಯಗಳು ಕೆಲವೊಮ್ಮೆ ಸಹೋದ್ಯೋಗಿಗಳಿಂದ ಅಚಾನಕ್ ಆಗಿ ಬಹಿರಂಗವಾಗಿ ಬಿಡುತ್ತದೆ. ಇದೀಗ ನಟಿ ಕಿಯಾರಾ ಅಡ್ವಾನಿ ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್ ಅವರ ಖಾಸಗಿ ಜೀವನದ ವಿಚಾರವನ್ನು ರಿವೀಲ್ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಗುಡ್ ನ್ಯೂಸ್ ಸಿನಿಮಾದ ಪ್ರಮೋಷನ್ ನಲ್ಲಿ ಕಿಯಾರಾ ಅಡ್ವಾನಿ ಜೊತೆಗೆ ಅಕ್ಷಯ್ ಕುಮಾರ್, ಕರಿನಾ ಕಪೂರ್ ಹಾಗೂ ದಿಲ್ಜಿತ್ ದೋಸಾಂಜ್ ಸಹ ಭಾಗಿಯಾಗಿದ್ದರು. ಈ ವೇಳೆ ಕಿಯಾರಾ ಅಡ್ವಾನಿ ಅವರು ಅಚಾನಕ್ ಆಗಿ ಸಿನಿಮಾದಲ್ಲಿ ನಟಿಸಿರುವ ನಾಲ್ಕು ಪ್ರಮುಖ ಕಲಾವಿದರ ಪೈಕಿ ಮೂವರಿಗೆ ಮಕ್ಕಳಿದ್ದಾರೆ. ಆದರೆ ನನಗೆ ಮಾತ್ರ ಮಗು ಇಲ್ಲ ಎಂದು ಹೇಳಿದ್ದರು.
ಈ ಮೂಲಕ ದಿಲ್ಜಿತ್ ದೋಸಾಂಜ್ ಅವರಿಗೆ ಮದುವೆಯಾಗಿದೆ, ಹಾಗೂ ಓರ್ವ ಮಗನೂ ಇದ್ದಾನೆ ಎನ್ನುವುದು ರಿವೀಲ್ ಆಗಿತ್ತು. ದಿಲ್ಜಿತ್ ಅವರು ಈವರೆಗೂ ತಮ್ಮ ಮದುವೆ ವಿಚಾರವನ್ನು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಆದರೆ ಕಿಯಾರಾ ದಿಲ್ಜಿತ್ ಅವರ ಬಗ್ಗೆ ನೀಡಿರುವ ಹೇಳಿಕೆ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಇನ್ನು ದಿಲ್ಜಿತ್ ಅವರ ಪತ್ನಿ ಭಾರತ ಮೂಲದ ಅಮೆರಿಕ ಮಹಿಳೆ. ಇವರಿಬ್ಬರಿಗೆ ಮಗ ಕೂಡ ಇದ್ದಾನೆ. ಲುಧಿಯಾನಾದಲ್ಲಿ ದಿಲ್ಜಿತ್ ಕುಟುಂಬದವರು ವಾಸವಾಗಿದ್ದಾರೆ ಎಂದು ಹೇಳಲಾಗುತ್ತಿದೆ.