ಬೆಂಗಳೂರು,ಏ 09 (DaijiworldNews/AK): ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಯುಗಾದಿಯಂದು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಯುಗಾದಿ ಹಬ್ಬದಂದು ಮಹಾಲಕ್ಷ್ಮಿ ಆಗಮನದ ಬಗ್ಗೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಏ.4ರಂದು ನಟಿ ಅದಿತಿ ಪ್ರಭುದೇವ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯುಗಾದಿ ಹಬ್ಬದಂದು ಮಗಳ ಆಗಮನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅದಿತಿ ಮಾಹಿತಿ ಹಂಚಿಕೊಂಡಿದ್ದಾರೆ. ಅದಿತಿ ಸಂತಸದ ಸುದ್ದಿ ಹೇಳುತ್ತಿದ್ದಂತೆ ಪತಿ ಯಶಸ್ ಕೂಡ ನನ್ನ ಜೀವದ ಗೆಳತಿ ಅದಿತಿ, ನಿನ್ನ ಹಾಗೆಯೇ ನಮ್ಮ ಮಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ನಟಿಗೆ ಅಭಿಮಾನಿಗಳು, ಸಿನಿಮಾ ತಾರೆಯರು ಶುಭಕೋರುತ್ತಿದ್ದಾರೆ.
ಕೊಡಗು ಮೂಲದ ಬ್ಯುಸಿನೆಸ್ ಮ್ಯಾನ್ ಯಶಸ್ ಪಾಟ್ಲಾ ಜೊತೆ 2022ರಲ್ಲಿ ಅದಿತಿ ಪ್ರಭುದೇವ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.