ಬೆಂಗಳೂರು, ಏ 05 (DaijiworldNews/AA): ನಟಿ ರಶ್ಮಿಕಾ ಮಂದಣ್ಣ ಅವರು ಇಂದು 28ನೇ ವರ್ಷದ ಬರ್ತ್ ಡೇಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನದಂದು ನಟಿಯ ಪುಷ್ಪ 2 ಸಿನಿಮಾದ ಪೋಸ್ಟರ್ ಬಿಡುಗಡೆಗೊಂಡದ್ದು, ಈ ಮೂಲಕ ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಇಂದು ಬಿಡುಗಡೆಯಾಗಿರುವ ಪುಷ್ಪ 2 ಸಿನಿಮಾದ ಪೋಸ್ಟರ್ ನಲ್ಲಿ ರಶ್ಮಿಕಾ ಅವರು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಅವರ ಪುಷ್ಪ ಸಿನಿಮಾದಲ್ಲಿನ ಲುಕ್ ಗೂ ಪುಷ್ಪ 2 ಸಿನಿಮಾದಲ್ಲಿನ ಲುಕ್ ಗೂ ಸಾಕಷ್ಟು ವ್ಯತ್ಯಾಸವಿದೆ.
ಇಂದು ರಿವೀಲ್ ಆಗಿರುವ ಪುಷ್ಪ 2 ಸಿನಿಮಾದ ಪೋಸ್ಟರ್ ನಲ್ಲಿ ರಶ್ಮಿಕಾ ಹಸಿರು ಸೀರೆ ಉಟ್ಟು, ಸಾಕಷ್ಟು ಚಿನ್ನಾಭರಣಗಳನ್ನು ಹೇರಿಕೊಂಡಿದ್ದಾರೆ. ಇದೇ ಆಗಸ್ಟ್ ಗೆ ಈ ಸಿನಿಮಾ ಬಿಡುಗಡೆಗೊಳ್ಳಲಿದ್ದು, ಈಗಾಗಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.