ಬೆಂಗಳೂರು, ಏ 03(DaijiworldNews/AA): ತ್ರಿಪುರ ಸುಂದರಿ ಧಾರವಾಹಿಯ ನಾಯಕ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೊಂದು ಸಖತ್ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು, ದಿವ್ಯಾ ಸುರೇಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಓರ್ವ ವ್ಯಕ್ತಿಯೊಂದಿಗೆ ಕ್ಲೋಸ್ ಆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದು, 'ನನಗೆ ಸಿಕ್ಕ ಅತ್ಯುತ್ತಮ ವಿಷಯ ಇದು' ಎಂದು ಬರೆದುಕೊಂಡಿದ್ದಾರೆ. ಕಳೆದ ವರ್ಷವೂ ಅದೇ ವ್ಯಕ್ತಿಯೊಂದಿಗೆ ದಿವ್ಯಾ ಅವರು ಫೋಟೋವನ್ನು ಹಂಚಿಕೊಂಡಿದ್ದರು. ಜೊತೆಗೆ 'ಹ್ಯಾಪಿ ಬರ್ತಡೇ ಲವ್' ಎಂದು ಬರೆದುಕೊಂಡಿದ್ದರು. ಇದೀಗ ಅದೇ ವ್ಯಕ್ತಿಯೊಂದಿಗೆ ಫೋಟೋವನ್ನು ಹಂಚಿಕೊಂಡಿರುವ ಕಾರಣದಿಂದ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.
ಈ ವ್ಯಕ್ತಿ ದಿವ್ಯಾ ಸುರೇಶ್ ಅವರ ಬಾಯ್ ಫ್ರೆಂಡ್ ಇರಬಹುದೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಆದರೆ ಈ ಬಗ್ಗೆ ನಟಿ ದಿವ್ಯಾ ಯಾವುದೇ ವಿಷಯವನ್ನು ಬಹಿರಂಗ ಪಡಿಸದೇ ಮೌನವಾಗಿದ್ದಾರೆ.