ಹೈದರಾಬಾದ್, ಏ 02(DaijiworldNews/AA): ಕಿರುತೆರೆಯ ಜನಪ್ರಿಯ ನಿರೂಪಕಿ ರಶ್ಮಿ ಗೌತಮ್ ಅವರು ಅಮೆರಿಕದ ವ್ಯಕ್ತಿಯೊಂದಿಗೆ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಎರಡೂ ಕುಟುಂಬದವರು ವಧು ವರರ ಜಾತಕ ತೋರಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು. ಸದ್ಯದಲ್ಲೇ ಮದುವೆಯ ದಿನಾಂಕ ಘೋಷಣೆ ಆಗಲಿದೆ ಎಂದು ತಿಳಿದುಬಂದಿದೆ. ಇನ್ನು ತಮ್ಮ ಮದುವೆಯ ಬಗ್ಗೆ ರಶ್ಮಿ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.
ತೆಲುಗಿನ ಜನಪ್ರಿಯ ಕಾಮಿಡಿ ಶೋ ಜಬರ್ದಸ್ತ್ ಮೂಲಕ ರಶ್ಮಿ ಅವರು ಹೆಚ್ಚು ಅಭಿಮಾನಿಗಳನ್ನು ಗಳಿಸಿದರು. ಹಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ್ ಪಾತ್ರಗಳನ್ನು ನಿಭಾಯಿಸಿದ ಅವರು, ನಾಯಕಿಯಾಗಿಯೂ ನಟಿಸಿದ್ದಾರೆ. ಗುಂಟೂರು ಟಾಕೀಸ್ ಸಿನಿಮಾ ಮೂಲಕ ಫೇಮಸ್ ಆದ ಅವರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಇದೀಗ ರಶ್ಮಿ ಅವರ ಮದುವೆ ಸುದ್ದಿ ವೈರಲ್ ಆಗುತ್ತಿದ್ದು, ಈ ಸುದ್ದಿ ಸತ್ಯವೋ ಸುಳ್ಳೋ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.