ಮುಂಬೈ,ಏ30(DaijiworldNews/AZM):ಮೇ 1ರಂದು (ನಾಳೆ) ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ತಮ್ಮ 31 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ಕಾ ಶರ್ಮಾರಿಗೆ ಅವರ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. 1988 ಮೇ 1ರಂದು ಅಜಯ್ ಕುಮಾರ್ ಶರ್ಮಾ ಹಾಗೂ ಅಶಿಮಾ ಶರ್ಮರವರ ಪುತ್ರಿಯಾಗಿ ಅಯೋಧ್ಯೆಯಲ್ಲಿ ಜನಿಸಿದ ಅನುಷ್ಕಾರವರು ಬೆಂಗಳೂರಿನಲ್ಲಿ ಬೆಳೆದರು.
ರಬ್ ನೇ ಬನಾದಿ ಜೋಡಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಅನುಷ್ಕಾ ತಮ್ಮ 11 ವರ್ಷಗಳಲ್ಲೇ ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದುಕೊಂಡಿದ್ದಾರೆ. ಅವರು ಕೇವಲ ನಟಿಯಷ್ಟೇ ಅಲ್ಲ. ನಿರ್ಮಾಪಕರೂ ಕೂಡಾ ಆಗಿದ್ದಾರೆ.
ದಾಂಪತ್ಯ ಜೀವನದಲ್ಲೂ ಅನುಷ್ಕಾ ಯಶಸ್ವಿ ಹೊಂದಿದ್ದಾರೆ. ಅನುಷ್ಕಾ - ಕೊಹ್ಲಿ ಮಾದರಿ ದಂಪತಿ ಎಂದ್ರೆ ತಪ್ಪಾಗಲಾರದು. ಕೊಹ್ಲಿ, ಅನುಷ್ಕಾರನ್ನು ಸಾಕಷ್ಟು ಬಾರಿ ಹೊಗಳಿದ್ದಾರೆ. ಅನುಷ್ಕಾ ಕೂಡ ಪ್ರತಿ ಹಂತದಲ್ಲಿ ಪತಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ.
ಅಂತೂ ಮೇ 1ರಂದು ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಅನುಷ್ಕಾರವರ ಜೀವನದಲ್ಲಿ ಮತ್ತಷ್ಟು ಯಶಸ್ವಿಗಳು ಬರಲಿ ಎಂದು ಹಾರೈಸುವ.