ಮುಂಬೈ,16(DaijiworldNews/ AK): ಅಮಿತಾಭ್ ಬಚ್ಚನ್ ಅವರು ಶುಕ್ರವಾರ (ಮಾರ್ಚ್ 15) ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾದರು ಎನ್ನುವ ಸುದ್ದಿ ಹರಿದಾಡಿತ್ತು.
ಇಷ್ಟೇ ಅಲ್ಲ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಎಂದು ವರದಿ ಆಗಿತ್ತು. ಎಲ್ಲರೂ ಬಿಗ್ ಬಿಗೆ ಹೃದಯದ ಸಮಸ್ಯೆ ಉಂಟಾಗಿದೆ ಎಂದು ಭಾವಿಸಿದ್ದರು. ಆದರೆ, ನಂತರ ಅವರ ಕಾಲಿನ ರಕ್ತನಾಳದಲ್ಲಿ ಸಮಸ್ಯೆ ಆಗಿತ್ತು ಎಂದು ವರದಿ ಆಯಿತು. ಅಸಲಿಗೆ ಇದೆಲ್ಲವೂ ಫೇಕ್ ಸುದ್ದಿ. ಅಮಿತಾಭ್ಗೆ ಏನು ಆಗೇ ಇರಲಿಲ್ಲ.
ಅಮಿತಾಭ್ ಅವರು ಐಎಸ್ಪಿಎಲ್ನ ಫಿನಾಲೆ ಮ್ಯಾಚ್ನಲ್ಲಿ ಭಾಗಿ ಆಗಿದ್ದಾರೆ. ‘ಮಜಿ ಮುಂಬೈ’ ಹಾಗೂ ‘ಟೈಗರ್ಸ್ ಆಫ್ ಕೋಲ್ಕತ್ತಾ’ ಮಧ್ಯೆ ಫಿನಾಲೆ ನಡೆದಿದೆ. ಅವರು ಮ್ಯಾಚ್ನ ಎಂಜಾಯ್ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆ ಸೇರಿ ಅವರು ಮುಂಬೈ ತಂಡವನ್ನು ಬೆಂಬಲಿಸಿದ್ದಾರೆ. ಇವರ ಜೊತೆ ಸಚಿನ್ ತೆಂಡೂಲ್ಕರ್ ಕೂಡ ಇದ್ದರು.
ಅಮಿತಾಭ್ ಅವರನ್ನು ನೊಡಿ ಸ್ಟೇಡಿಯಂನಿಂದ ಫ್ಯಾನ್ಸ್ ಹರ್ಷೋದ್ಘಾರ ಕೂಗಿದ್ದಾರೆ. ಅಲ್ಲದೆ ಕೆಲವರು ಅವರ ಆರೋಗ್ಯದ ಬಗ್ಗೆ ವಿಚಾರಸಿದ್ದಾರೆ. ಮೊದಲು ಅವರು ಕೈಸನ್ನೆ ಮಾಡಿ ತಾವು ಆರೋಗ್ಯವಾಗಿ ಇರುವುದಾಗಿ ಹೇಳಿದ್ದಾರೆ. ಆ ಬಳಿಕ ‘ಫೇಕ್ ನ್ಯೂಸ್’ ಎಂದಿದ್ದಾರೆ. ಈ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಅಮಿತಾಭ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದು ಯಾರು ಎನ್ನುವ ಪ್ರಶ್ನೆ ಮೂಡಿದೆ.ಈಗ ಅವರು ಆರೋಗ್ಯವಾಗಿದ್ದಾರೆ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ಖುಷಿಯಾಗಿದ್ದಾರೆ.