ಬೆಂಗಳೂರು,ಮಾ08 (DaijiworldNews/ AK): ನಟಿ ಮಿಲನಾ ನಾಗರಾಜ್ ದಂಪತಿ ಮಹಿಳಾ ದಿನಾಚರಣೆ ದಿನದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ತಾಯಿ ಆಗುತ್ತಿರುವ ವಿಚಾರವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಸೆಪ್ಟೆಂಬರ್ ನಲ್ಲಿ ತಮ್ಮ ಮನೆಗೆ ಹೊಸ ಅತಿಥಿ ಬರುತ್ತಿರುವುದಾಗಿ ಬರೆದುಕೊಂಡಿದ್ದಾರೆ.
ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಸಿನಿಮಾ ರಂಗದ ಅಪರೂಪದ ಜೋಡಿ. ಒಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಲೇ ಪ್ರೀತಿಗೆ ಬಿದ್ದವರು. ಆನಂತರ ಮನೆಯವರ ಒಪ್ಪಿಗೆ ಪಡೆದುಕೊಂಡು ಮದುವೆಯಾದವರು. ಮದುವೆ ನಂತರವೂ ಇಬ್ಬರೂ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದಾರೆ. ಜೊತೆಗೆ ಸಿನಿಮಾದಲ್ಲಿ ನಟನೆ, ನಿರ್ಮಾಣ ಮತ್ತು ನಿರ್ದೇಶನವನ್ನೂ ಮಾಡಿದ್ದಾರೆ.
ಇದೀಗ ಈ ಜೋಡಿಯು ಹೊಸ ಅತಿಥಿಯ ಆಗಮನಕ್ಕೆ ಕಾಯುತ್ತಿದ್ದಾರೆ. ಈ ಖುಷಿಯನ್ನು ಅವರು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ‘ಬೇಬಿ ಕ್ರಿಸ್ಮಿ’ ಎನ್ನುವ ಸುಂದರವಾದ ಪೋಸ್ಟ್ ರೆಡಿ ಮಾಡಿಸಿ ಅದನ್ನು ಮಿಲನಾ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.