ಬೆಂಗಳೂರು,ಏ28(DaijiworldNews/AZM):ಫೋಟೋಶೂಟ್ ಗೆಂದು ಸಹನಟಿಯನ್ನು ಕನ್ನಡ ಚಿತ್ರರಂಗದ ನಿರ್ದೇಶಕನೊಬ್ಬ ಕರೆದು ಅಸಭ್ಯವಾಗಿ ವರ್ತಿಸಿದ್ದಾನೆಂದು ನಟಿ ಆರೋಪಿಸಿದ್ದಾರೆ.
'ಎಣ್ಣೆನೆ ದೇವರು' ಎಂಬ ಚಿತ್ರದ ನಿರ್ದೇಶಕ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆಂದು ನಟಿ ಆರೋಪಿಸಿದ್ದಾರೆ. ತನ್ನ ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ಹೇಳಿದ್ದ ನಿರ್ದೇಶಕ ಫೋಟೋ ಶೂಟ್ ಗಾಗಿ ನಾಗಸಂದ್ರದಲ್ಲಿ ಇರುವ ತನ್ನ ಮನೆಗೆ ಬರುವಂತೆ ನಟಿಯನ್ನು ಕರೆದಿದ್ದಾನೆ. ಹಾಗೂ ಫೋಟೋಶೂಟ್ ನೆಪದಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ನಟಿ ಹೇಳಿದ್ದು, ನಿರ್ದೇಶಕ ಈ ಆರೋಪವನ್ನು ಅಲ್ಲಗಳೆದಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ನಟಿ ಸೋಮವಾರದಂದು ಫಿಲಂ ಚೆಂಬರ್ ಗೆ ದೂರು ನೀಡಲಿದ್ದಾರೆ.