ಮುಂಬೈ, ಫೆ 28 (DaijiworldNews/SK): ಬಹುಭಾಷ ನಟಿ ತಾಪ್ಸಿ ಪನ್ನು ತಮ್ಮ ಬಹುಕಾಲ ಗೆಳೆಯ ಬ್ಯಾಡ್ಮಿಂಟನ್ ಆಟಗಾರ ಮಥಾಯಸ್ ಬೋ ಜೊತೆಗೆ ಅತೀ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.
ಉದಯ್ಪುರ್ನಲ್ಲಿ ವಾಸವಾಗಿದ್ದು ಕಳೆದ ಹತ್ತು ವರ್ಷಗಳಿಂದ ರಿಲೇಷನ್ ಶಿಪ್ನಲ್ಲಿರುವ ತಾಪ್ಸಿ ಪನ್ನು ಮತ್ತು ಮಥಿಯಾಸ್ ಬೋ ಅವರ ವಿವಾಹವು ಸಿಖ್ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯಲಿದೆ ಎನ್ನಲಾಗುತ್ತಿದೆ.
ತಾಪ್ಸಿ ಪನ್ನು ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಬಾಲಿವುಡ್ನಲ್ಲಿ ಅವರಿಗೆ ಸಾಕಷ್ಟು ಮಂದಿ ಸ್ನೇಹಿತರು ಕೂಡ ಇದ್ದಾರೆ. ಆದರೆ ಅವರು ತಮ್ಮ ಮದುವೆಗೆ ಯಾವುದೇ ಸೆಲೆಬ್ರಿಟಿಗಳನ್ನು ಆಹ್ವಾನಿಸದೆ ಕೇವಲ ಕುಟುಂಬದವರ ಸಮ್ಮುಖದಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿವಾಹದ ಬಗ್ಗೆ ನಟಿ ತಾಪ್ಸಿ ಪನ್ನು ಅವರಿಂದ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರಬರಬೇಕಾಗಿದೆ.