ಮುಂಬೈ, ಫೆ 24 (DaijiworldNews/HR): ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಿರುವ ನಟಿ ಕಂಗನಾ ರಣಾವತ್ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ನಟಿ ಕಂಗನಾ ರಣಾವತ್ ಅವರು ಇತ್ತಿಚೆಗೆ ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಡಾರ್ಕ್ ವೆಬ್ ವಿಚಾರದಲ್ಲೂ ಏನಾದರೂ ಮಾಡಬೇಕು. ಹಲವು ಸಿನಿಮಾ ಸೆಲೆಬ್ರಿಟಿಗಳು ಅಕ್ರಮ ಸ್ಟಫ್ಗಳನ್ನು ಡಾರ್ಕ್ ವೆಬ್ನಿಂದ ತರಿಸಿಕೊಳ್ಳುತ್ತಿಲ್ಲ. ಇದರ ಜೊತೆಗೆ ವಾಟ್ಸಾಪ್ ಹಾಗೂ ಮೇಲ್ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಇದನ್ನು ಕೇಂದ್ರ ಪತ್ತೆ ಹೆಚ್ಚಿದರೆ ದೊಡ್ಡ ಸೆಲೆಬ್ರಿಟಿಗಳ ಹೆಸರು ಹೊರ ಬರುತ್ತದೆ ಎಂದಿದ್ದಾರೆ
ಸದ್ಯ ಕಂಗನಾ ‘ಎಮರ್ಜೆನ್ಸಿ’ ಸಿನಿಮಾದ ಕೆಲಸದಲ್ಲಿ ಅವರು ಬ್ಯುಸಿ ಆಗಿದ್ದು, ಈ ಸಿನಿಮಾಗೆ ಅವರದ್ದೇ ನಿರ್ದೇಶನ ಇದೆ. ಲೀಸ್ ದಿನಾಂಕ ಮುಂದಕ್ಕೆ ಹೋಗಿದೆ.