ಹೈದರಾಬಾದ್, ಫೆ 22 (DajiworldNews/AA): ಇನ್ಮುಂದೆ ಸಾರ್ವಜನಿಕವಾಗಿ ನಟ ಮಹೇಶ್ ಬಾಬು ಅವರು ಕಾಣಿಸಿಕೊಳ್ಳಬಾರದು ಎಂದು ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ತಾಕೀತು ಮಾಡಿದ್ದಾರೆ.
ಹೌದು ಈ ರೀತಿಯ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದು, ರಾಜಮೌಳಿ ಅವರು ಮಹೇಶ್ ಬಾಬು ಅವರಿಗೆ ಹೀಗೆ ಆದೇಶಿಸಲು ಕಾರಣ ಕೂಡ ಇದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಅವರು ಒಂದಾಗಿ ಸಿನಿಮಾವೊಂದನ್ನು ಮಾಡುತ್ತಿದ್ದು, ಈ ಸಿನಿಮಾದಲ್ಲಿನ ಪಾತ್ರಕ್ಕಾಗಿ ಮಹೇಶ್ ಬಾಬು ಅವರು ತಮ್ಮ ಗೆಟಪ್ ಅನ್ನು ಬದಲಿಸಿಕೊಳ್ಳಲಿದ್ದಾರೆ. ಈ ಕಾರಣದಿಂದಲೇ ನಟ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎಂದು ರಾಜಮೌಳಿ ಅವರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಇನ್ನು ಈ ಸಿನಿಮಾಕ್ಕಾಗಿ ನಟ ಮಹೇಶ್ ಬಾಬು ಅವರು ಬಾಡಿ ಬಿಲ್ಡ್ ಮಾಡಲಿದ್ದಾರೆ. ವಿದೇಶದ ಟ್ರೇನರ್ ಗಳಿಂದ ಅವರು ತರಬೇತಿಯನ್ನೂ ಪಡೆಯುತ್ತಿದ್ದಾರೆ. ಆದ್ದರಿಂದ ಅವರ ಹೊಸ ಗೆಟಪ್ ಜನರಿಗೆ ತಿಳಿಯಬಾರದು ಎಂಬ ಕಾರಣಕ್ಕೆ ರಾಜಮೌಳಿ ಅವರು ಈ ರೀತಿ ಆದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.