ಗೋವಾ, ಫೆ 21(DaijiworldNews/AA): ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಬಹುಕಾಲದ ಗೆಳೆಯ ನಿರ್ಮಾಪಕ ಜಾಕಿ ಭಗ್ನಾನಿಯೊಂದಿಗೆ ಇಂದು ಗೋವಾದ ಕಡಲ ತೀರದಲ್ಲಿ ಸಪ್ತಪದಿ ತುಳಿದಿದ್ದಾರೆ.
ಸಿಖ್ ಮತ್ತು ಸಿಂಧಿ ಎರಡೂ ಶೈಲಿಯಲ್ಲಿ ರಾಕುಲ್- ಜಾಕಿ ಅವರ ವಿವಾಹವು ಅದ್ಧೂರಿಯಾಗಿ ನಡೆದಿದೆ. ಗುರು ಹಿರಿಯರ ಸಮ್ಮುಖದಲ್ಲಿ ಈ ಜೋಡಿಯು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 'ನನ್ನದು ಮತ್ತು ಎಂದೆಂದಿಗೂ' ಎಂದು ಬರೆದು ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಟಿ ರಾಕುಲ್ ಶೇರ್ ಮಾಡಿದ್ದಾರೆ. ಇನ್ನು ಈ ಜೋಡಿಯು ಕ್ರೀಮ್- ಗೋಲ್ಡನ್ ಉಡುಗೆ ತೊಟ್ಟಿದ್ದು, ಮದುವೆ ವೇಳೆ ಸಖತ್ ಮುದ್ದಾಗಿ ಕಾಣಿಸುತ್ತಿದ್ದರು.
ರಾಕುಲ್- ಜಾಕಿರ ವಿವಾಹದಲ್ಲಿ ಅಕ್ಷಯ್ ಕುಮಾರ್, ವರುಣ್ ಧವನ್, ಆದಿತ್ಯರಾಯ್ ಕಪೂರ್, ಅನನ್ಯ ಪಾಂಡೇ, ಶಿಲ್ಪಾ ಶೆಟ್ಟಿ ಹೀಗೆ ಬಾಲಿವುಡ್ ನ ತಾರಾ ಬಳಗವೇ ಆಗಮಿಸಿತ್ತು. ಇನ್ನು ಈ ನವಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದು, ಇವರ ಅದ್ಧೂರಿ ಆರತಕ್ಷತೆಯು ಕೆಲವೇ ದಿನಗಳಲ್ಲಿ ಮುಂಬೈನಲ್ಲಿ ಸಹ ಆಯೋಜಿಸಲಾಗಿದೆ.