ಮುಂಬೈ, ಫೆ 18(DaijiworldNews/AA): ಬಾಲಿವುಡ್ ನಟಿ ಹೇಮಾ ಮಾಲಿನಿ ಪುತ್ರಿ, ನಟಿ ಇಶಾ ಡಿಯೋಲ್ ಅವರು ಇತ್ತೀಚೆಗೆ ತಮ್ಮ ವಿಚ್ಚೇದನ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ಇದೀಗ ಇಶಾ ಡಿಯೋಲ್ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ.
ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ನಟಿ ಹೇಮಾ ಮಾಲಿನಿ, ನಾನು ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ನನ್ನ ಕುಟುಂಬದ ಬೆಂಬಲವಿದೆ. ಅವರ ಬೆಂಬಲದಿಂದಲೇ ನಾನು ಆರಾಮಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಮಕ್ಕಳಿಗೆ ರಾಜಕೀಯಕ್ಕೆ ಬರುವ ಆಸಕ್ತಿ ಇದ್ದರೆ ಬರಲಿ. ಮಗಳು ಇಶಾಗೆ ರಾಜಕೀಯಕ್ಕೆ ಬರುವ ಆಸಕ್ತಿ ಇದೆ ಎಂದು ಅವರು ತಿಳಿಸಿದ್ದರು.
ಉದ್ಯಮಿ ಭರತ್ ತಖ್ತಾನಿ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಇಶಾ ಡಿಯೋಲ್ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ವಿಚಾರ ಬಾಲಿವುಡ್ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಸಂದರ್ಶನದ ಮೂಲಕ ಮಗಳು ರಾಜಕೀಯಕ್ಕೆ ಎಂಟ್ರಿ ನೀಡುವ ವಿಚಾರದ ಬಗ್ಗೆ ನಟಿ ಹೇಮಾ ಮಾಲಿನಿ ರಿವೀಲ್ ಮಾಡಿದ್ದಾರೆ. ನಟಿ ಇಶಾ ಡಿಯೋಲ್ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೋ ಇಲ್ಲವೋ ಎಂಬುದಕ್ಕೆ ಉತ್ತರ ಸಿಗಬೇಕಿದೆ.