ಭಟ್ಕಳ, ಫೆ 17(DaijiworldNews/SK): ಕನ್ನಡ ಸಿನಿಮಾದ ಹೆಸರಾಂತ ನಟ, ರಾಕಿಂಗ್ ಸ್ಟಾರ್ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ, ಸರಳತೆ ಮೆರೆಯುದರಲ್ಲಿ ಎತ್ತಿದ ಕೈ. ಅದೇ ರೀತಿ ಇತ್ತೀಚೆಗೆ ಯಶ್ ಹಾಗೂ ಅವರ ಪತ್ನಿ ರಾಧಿಕಾ ಅವರು ಮಠವೊಂದಕ್ಕೆ ಭೇಟಿ ನೀಡುವ ವೇಳೆ ಸಾಮಾನ್ಯರಂತೆ ರಸ್ತೆ ಬದಿಯ ಅಂಗಡಿಗೆ ಹೋಗಿ ಪತ್ನಿ ರಾಧಿಕ ಅವರಿಗೆ ಐಸ್ ಕ್ಯಾಂಡಿ ಕೊಡಿಸಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಫೆ. 16 ರಂದು ಯಶ್ ಮತ್ತು ರಾಧಿಕ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯಲ್ಲಿರುವ ಚಿತ್ರಾಪುರ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಯ ಆಶೀರ್ವಾದ ಪಡೆದಿದ್ದಾರೆ. ಬಳಿಕ ಯಶ್ ದಂಪತಿ ಸಾಮಾನ್ಯರಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಿ, ಕಿರಾಣಿ ಅಂಗಡಿ ಹೋಗಿ ತನ್ನ ಮಗಳು ಐರಾಳಿಗೆ ತಿಂಡಿ ತೆಗೆಸಿಕೊಟ್ಟು, ಪತ್ನಿಗೆ ಐಸ್ ಕ್ಯಾಂಡಿ ಕೊಡಿಸಿದ್ದಾರೆ. ನಂತರ ರಾಧಿಕಾ ಅವರು ಅಂಗಡಿ ಪಕ್ಕನೇ ಕೂತು ಐಸ್ ಕ್ಯಾಂಡಿ ಸವಿದಿದ್ದಾರೆ.
ಇನ್ನು ಮಠಕ್ಕೆ ರಾಕಿಂಗ್ ಸ್ಟಾರ್ ದಂಪತಿ ಆಗಮನದ ಸುದ್ದಿ ತಿಳಿಯುತ್ತಲೇ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮಠದ ಸುತ್ತ ಜಮಾಯಿಸಿದ್ದರು. ಆ ಬಳಿಕ ಯಶ್ ದಂಪತಿಗಳು ಅಭಿಮಾನಿಗಳ ಕೋರಿಕೆ ಮೇರೆಗೆ ನೆರೆದಿದ್ದ ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್ ಕೊಟ್ಟು ಸರಳತೆ ಮೇರೆದಿದ್ದಾರೆ.