ಮುಂಬೈ, ಫೆ 11 (DaijiworldNews/SK): ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ರಾಮಾಯಣ ಕಥೆ ಆಧರಿಸಿ ಮಾಡುತ್ತಿರುವ 'ರಾಮಾಯಣ' ಸಿನಿಮಾದ ಮತ್ತೊಂದು ಇಂಟ್ರೆಸ್ಟಿಂಗ್ ಅಪ್ಡೇಟ್ ಹೊರಬಿದ್ದಿದೆ. ಈ ಸಿನಿಮಾದಲ್ಲಿ ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಜಾನ್ವಿ ಕಪೂರ್ ನಟಿಸಿದರೆ ಇದೀಗ ಶೂರ್ಪನಖಿ ಪಾತ್ರಕ್ಕಾಗಿ ಕನ್ನಡದ ‘ಗಿಲ್ಲಿ’ ನಟಿ ಲುಕ್ ಟೆಸ್ಟ್ ಸಹ ನಡೆದಿದೆ ಎನ್ನಲಾಗುತ್ತಿದೆ.
ದೆಹಲಿ ಬೆಡಗಿ ರಾಕುಲ್ ಪ್ರೀತ್ ಸಿಂಗ್ ಶೂರ್ಪನಖಿ ಪಾತ್ರಕ್ಕೆ ಲುಕ್ ಟೆಸ್ಟ್ ನೀಡಿದ್ದಾರೆ.
ರಾಕುಲ್ ಅವರು ಮೊದಲು ನಟಿಸಿದ್ದು, ಕನ್ನಡದ ‘ಗಿಲ್ಲಿ' ಸಿನಿಮಾದಲ್ಲಿ. ಖ್ಯಾತ ನಟ ಜಗ್ಗೇಶ್ ಪುತ್ರ ಗುರುರಾಜ್ಗೆ ನಾಯಕಿಯಾಗಿ ರಾಕುಲ್ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದರು. ಇದೀಗ ರಾಕುಲ್ ಶೂರ್ಪನಖಿ ಪಾತ್ರಕ್ಕೆ ಲುಕ್ ಟೆಸ್ಟ್ ನೀಡಿರುವ ವಿಷಯ ತಿಳಿಯುತ್ತಿದಂತೆ ನಟಿಯ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇನ್ನು ರಾಮಾಯಣದಲ್ಲಿ ಶೂರ್ಪನಖಿ ಪಾತ್ರ ಚಿಕ್ಕದಾದರೂ ಆ ಪಾತ್ರಕ್ಕೆ ಮಾತ್ರ ಬಹಳ ಮಹತ್ವ ಇದೆ. ಹಾಗಾಗಿ ಆ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಚರ್ಚೆ ಕೂಡ ಬಾಲಿವುಡ್ ಅಂಗಳದಲ್ಲಿ ಶುರುವಾಗಿತ್ತು. ಸದ್ಯ ಈ ಪಾತ್ರಕ್ಕಾಗಿ ರಾಕುಲ್ ಪ್ರೀತ್ ಸಿಂಗ್ ಜೊತೆ ಚಿತ್ರತಂಡ ಮಾತುಕತೆ ನಡೆಸಿ. ಲುಕ್ ಟೆಸ್ಟ್ ಸಹ ನಡೆದಿದೆ ಎಂದು ತಿಳಿದು ಬಂದಿದೆ.