ಬೆಂಗಳೂರು, ಫೆ 10(DaijiworldNews/SK): 60 ದಶಕದಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ನಟ ಧರ್ಮೇಂದ್ರ ಅವರು ಬಾಲಿವುಡ್ನ ಬಹು ಬೇಡಿಕೆಯ ನಟರು. ಈಗಲೂ ಪೋಷಕ ಪಾತ್ರಗಳಲ್ಲಿ ಛಾಪು ಮೂಡಿಸುತ್ತಿದ್ದಾರೆ ಇದೀಗಾ ಸಿನಿಮಾ ರಂಗಕ್ಕೆ ಕಾಲಿಟ್ಟು 64 ವರ್ಷಗಳ ಬಳಿಕ ಅವರು ಹೆಸರು ಬದಲಿಸಿಕೊಂಡರೇ ಎಂಬ ಸುದ್ದಿ ಎಲ್ಲರ ತಲೆ ಕೆಡಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಆಗಿರೋದು ಫೆ 9ರಂದು ರಿಲೀಸ್ ಆದ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ.
ಶಾಹಿದ್ ಕಪೂರ್ ಹಾಗೂ ಕೃತಿ ಸನೋನ್ ನಟನೆಯ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಫೆ 9 ರಂದು ಸಿನಿಮಾ ತೆರೆಕಂಡಿದೆ. ಈ ಚಿತ್ರಕ್ಕೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾದಲ್ಲಿ ಧರ್ಮೇಂದ್ರ ಅವರು ಹೀರೋ ಶಾಹಿದ್ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇಷ್ಟು ವರ್ಷ ಧರ್ಮೇಂದ್ರ ಅವರ ಯಾವುದೇ ಚಿತ್ರಗಳಲ್ಲಿಯೂ ಹೆಸರನ್ನು ಧರ್ಮೇಂದ್ರ ಎಂದಷ್ಟೇ ತೋರಿಸಲಾಗುತ್ತಿತ್ತು. ಆದರೆ ಈ ಚಿತ್ರದಲ್ಲಿ ಧರ್ಮೇಂದ್ರ ಸಿಂಗ್ ಡಿಯೋಲ್ ಎಂದು ತೋರಿಸಲಾಗಿದೆ. ಇದೀಗ ನೆಟ್ಟಿಗರು ಈ ಹೆಸರಿನಲ್ಲಿ ಬದಲಾವಣೆ ಏಕೆ ಎಂದು ಪ್ರಶ್ನಿಸಿದರೇ ಇನ್ನು ಕೆಲವರು ಇದರ ಹಿಂದಿನ ಉದ್ದೇಶ ಏನು ಎಂದು ಕೇಳುತ್ತಿದ್ದಾರೆ.